ಮುಳ್ಳೇರಿಯ: ಕಾರಡ್ಕ ಸಮೀಪದ ಪೆÇನ್ನೆಪ್ಪಲ ನಿವಾಸಿ, ಕನ್ನಡ ಹೋರಾಟಗಾರ ಕೆ ಎಂ ಗೋಪಾಲಕೃಷ್ಣ ಭಟ್(84)ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಕಳೆದ ಹಲವು ವರ್ಷಗಳಿಂದ ಮುಳ್ಳೇರಿಯದ ತನ್ನ ಪುತ್ರ ಸಾಹಿತಿ, ಕನ್ನಡ ಹೋರಾಟಗಾರ ಡಾ. ನರೇಶ್ ಅವರೊಂದಿಗೆ ವಾಸಿಸುತ್ತಿದ್ದರು.
ಇವರು ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ, ಕನ್ನಡ ಹೋರಾಟಗಾರ, ಅಂಕಣ ಬರಹಗಾರರಾಗಿಯೂ ಪ್ರಸಿದ್ಧರಾಗಿದ್ದರು. ಇಳಿವಯಸ್ಸಿನಲ್ಲೂ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು ಹನ್ನಡ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದು, ಕನ್ನಡ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ಪುತ್ರನನ್ನು ಅಗಲಿದ್ದಾರೆ.


