ಕುಂಬಳೆ: ತ್ರಿಶ್ಯೂರಿನಲ್ಲಿ ಹಲವು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿರುವ ಮೂರು ಮಂದಿಯನ್ನು ಅಲ್ಲಿನ ಪೊಲೀಸರು ಕುಂಬಳೆಯಿಂದ ಬಂಧಿಸಿದ್ದಾರೆ. ತ್ರಿಶ್ಯೂರ್ ಕರಿಕ್ಕುಳಿ ನಿವಾಸಿ ಇಜಾಸ್ ಯಾನೆ ಡುಡು, ಕರುವನ್ನೂರ್ ನೆಡುಂಬೂರಕ್ಕಲ್ ನಿವಾಸಿ ನಿಯಾಸ್ ಹಾಗೂ ಪೊರತ್ತಿಶ್ಯೇರಿ ನಿವಾಸಿ ಗೋಕುಲ್‍ಕೃಷ್ಣ ಬಂಧಿತರು.
ಇವರ ವಿರುದ್ಧ ಕೊಟೇಶನ್,ಕಾಪಾ, ಮಾದಕ ವಸ್ತು ಸಾಗಾಟ, ಹತ್ಯಾಯತ್ನ ಸೇರಿದಂತೆ ಹಲವು ಪ್ರಕರಣ ದಾಖಲಾಘಿದ್ದು, ತಲೆಮರೆಸಿಕೊಂಡು ಜೀವನ ಸಾಗಿಸುತ್ತಿದ್ದರು.ರೋಪಿಗಳು ಕುಂಬಳೆಯಲ್ಲಿರುವ ಬಗ್ಗೆ ಮಾಹಿತಿ ಪಡೆದ ತ್ರಿಶ್ಯೂರಿನ ಪೊಲಿಸರು, ಕುಂಬಳೆ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಕುಂಬಳೆಯ ಮನೆಯ ಟೆರೇಸ್ ಮೇಲೆ ಅವಿತುಕೊಂಡಿದ್ದಾರೆಂಬ ಮಾಹಿತಿಯನ್ವಯ ತ್ರಿಶ್ಯೂರ್ ಹಾಗೂ ಕುಂಬಳೆ ಠಾಣೆ ಪೊಲೀಸರು ಜಂಟಿ ಕಾಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ. ಇವರಿಗೆ ಸಹಾಯ ಒದಗಿಸಿದವರ ಮೇಲೂ ಪೊಲೀಸರು ನಿಗಾಯಿರಿಸಿದ್ದಾರೆ.


