ಕಾಸರಗೋಡು: ಕಲಾವಿದರ ಸಂಘಟನೆಯಾದ "ಸವಾಕ್" ಹಮ್ಮಿಕೊಂಡ ಕಾಫಿ ವಿಥ್ ಆರ್ಟಿಸ್ಟ್ ಅಭಿಯಾನ ಸವಾಕ್ (ಸ್ಟೇಜ್ ಆರ್ಟಿಸ್ಟ್ಸ್ ಮತ್ತು ವರ್ಕರ್ಸ್ ಅಸೋಸಿಯೇಷನ್ ಆಫ್ ಕೇರಳ) ಕಾಸರಗೋಡು ಜಿಲ್ಲಾಧ್ಯಕ್ಷ ಉಮೇಶ್ ಎಂ ಸಾಲಿಯಾನ್ ಅವರ ನೇತೃತ್ವದಲ್ಲಿ ನಡೆಯಿತು. ಮೊದಲ ಕಾರ್ಯಕ್ರಮವು ಪ್ರಸಿದ್ಧ ತಿಡಂಬು(ದೇವರ ನೃತ್ಯ)ಕಲಾವಿದರೂ, ಪೋಕ್ ಲೋರ್ ಪ್ರಶಸ್ತಿ ಪಡೆದಿರುವ ಉಪೇಂದ್ರ ಅಗ್ಗಿತ್ತಾಯ-ಜ್ಯೋತಿಲಕ್ಷ್ಮಿ ಅವರ ತ್ರಿಕನ್ನಾಡಿನ ಶಿವ ಗಂಗಾ ನಿವಾಸದಲ್ಲಿ ಗೌರವಿಸಲಾಯಿತು.
ಎರಡನೇ ಕಾರ್ಯಕ್ರಮ ಕಾಸರಗೋಡಿನ ಹಿರಿಯ ಗಾಯಕ ಮಾಧವ ಅವರನ್ನು ಮಾಂಙಡಿನ ನಿವಾಸದಲ್ಲಿ ಗೌರವಿಸಲಾಯಿತು.
ಉಮೇಶ್ ಎಂ ಸಾಲಿಯಾನ್, ಯಕ್ಷಗಾನ ಕಲಾವಿದ ನರಸಿಂಹ ಬಲ್ಲಾಳ್, ಹಿರಿಯ ರಂಗಭೂಮಿ ಕಲಾವಿದ ಟಿ.ವಿ.ಗಂಗಾಧರ, ಗಾಯಕರುಗಳಾದ ದಿವಾಕರ ಅಶೋಕನಗರ, ಲೀಲಾಧರ ಆಚಾರ್ಯ, ಗಾಯಕಿ ಮತ್ತು ಕಲಾವಿದೆ ಜಯಂತಿ ಸುವರ್ಣ, ಜಾಹ್ನವಿ ಟೀಚರ್, ಕಲಾವಿದರಾದ ನಾರಾಯಣ(ಹುಲಿ) ಪಾಲಕುನ್ನು ಮುಂತಾದವರು ಉಪಸ್ಥಿತರಿದ್ದರು.


