ಕಾಸರಗೋಡು: ಕನ್ನಡ ಭವನದ ರೂವಾರಿ ಡಾ. ವಾಮನ್ ರಾವ್ ಬೇಕಲ್ ಸಂಚಾಲಕತ್ವದ ಕನ್ನಡ ಭವನ ಹಾಗೂ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಮೂಲಕ ಕೊಡಮಾಡುವ ಕನ್ನಡ ಕಟ್ಟಾಳು ಪ್ರಶಸ್ತಿಯನ್ನು ಕ. ರ. ವೇ. ಕರ್ನಾಟಕ ರಾಜ್ಯ ಸಂಚಾಲಕರು ಹಾಗೂ ಕನ್ನಡ ಹೋರಾಟಗಾರ ವಿಜಯ ಕುಮಾರ್ (ವಿಜಿ )ಅವರಿಗೆ ಪ್ರದಾನ ಮಾಡಲಾಯಿತು.
"ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲಕ್ಷ್ಮೇಶ್ವರ ಗೋವಿನಾಳದ ಶ್ರೀ ರಮೇಶ್ ಮಹಾಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಿದರು.
ಬಿ. ಜೆ. ಪಿ ರಾಜ್ಯ ಕಾರ್ಯದರ್ಶಿ ವಕೀಲ ಕೆ. ಶ್ರೀಕಾಂತ್, ಡಾ. ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್, ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ಕ. ಸಾ. ಪ ಗಡಿನಾಡ ಘಟಕ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಡಾ. ಶಾಂತ ಪುತ್ತೂರು, ರಾಧಾಕೃಷ್ಣ ಕೆ ಉಳಿಯತ್ತಡ್ಕ, ಸಂ. ನ. ತಮ್ಮನಗೌಡ್ರ ಗದಗ, ಗುರುಪ್ರಸಾದ್ ಕೋಟೆಕಣಿ ನಗರಸಭಾ ಸದಸ್ಯ ಶಂಕರ ಮೊದಲಾದವರು ಉಪಸ್ಥಿತರಿದ್ದರು.



