HEALTH TIPS

ಗಡಿನಾಡಿನ ಬಹುಭಾಷಾ ಅಸ್ತಿತ್ವದಿಂದ ಕನ್ನಡದ ಅಸ್ಮಿತೆಗೆ ಮೆರುಗು-ಮಂಜೇಶ್ವರ ಕಾಲೇಜಿನಲ್ಲಿ ವಿಚಾರ ಸಂಕಿರಣ ಉದ್ಘಾಟಿಸಿ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ

ಮಂಜೇಶ್ವರ: ಗಡಿನಾಡು ಕಾಸರಗೋಡಿನ ಬಹುಭಾಷಾ ಅಸ್ತಿತ್ವ, ಇಲ್ಲಿನ ಕನ್ನಡದ ಅಸ್ಮಿತೆಗೆ ಮೆರುಗು ತಂದುಕೊಟ್ಟಿರುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.  


ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಸಹಯೋಗದಲ್ಲಿ 'ಕಾಸರಗೋಡಿನಲ್ಲಿ ಕನ್ನಡ ಅಸ್ಮಿತೆ ಯುವಶಕ್ತಿ ಮತ್ತು ಭವಿಷ್ಯ'ಎಂಬ ವಿಷಯದ ಕುರಿತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಗುರುವಾರ ನಡೆದ  ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. 

ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗ ಮತ್ತು ಗಿಳಿವಿಂಡು ಕನ್ನಡ ಸಾಹಿತ್ಯಕ ಮತ್ತು ಸಾಂಸ್ಕøತಿಕ ವೇದಿಕೆಯ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಹುಭಾಷಾ ಸಂಗಮ ಭೂಮಿಯಾಗಿರುವ ಕಾಸರಗೋಡಿನಲ್ಲಿ ಇಲ್ಲಿನ ಭಾಷೆ, ಸಂಸ್ಕøತಿ, ಸಾಹಿತ್ಯಗಳ ಬಗ್ಗೆ ಸಮಗ್ರ ಚರ್ಚೆ ನಡೆಯಬೇಕಾಗಿದೆ. ಬಹುಭಾಷಾ ಪ್ರದೇಶದಲ್ಲಿನ ಕನ್ನಡ ಭಾಷೆ ಹಾಗೂ ಸಂಸ್ಕøತಿಯ ಅಸ್ಮಿತೆ ಬಗ್ಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಚರ್ಚೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇರಳ ಸರ್ಕಾರ ಸ್ಪಷ್ಟನೆ ನೀಡಬೇಕಾಗಿದೆ ಎಂದು ತಿಳಿಸಿದರು.

ವಿಲೀನ ಅಸಾದ್ಯ:

ಕಾಸರಗೋಡು ಕರ್ನಾಟಕದೊಂದಿಗೆ ವಿಲೀನೀಕರಣ ಹೋರಾಟಕ್ಕೆ ಏಳುದಶಕಗಳ ಇತಿಹಾಸವಿದ್ದು, ಇಲ್ಲಿ ಸಾಂಸ್ಕøತಿಕ, ಭಾಷಾ ಕ್ರಾಂತಿ ಹೊರತಾಗಿ ವಿಲೀನ ಪ್ರಕ್ರಿಯೆ ಅಸಾಧ್ಯದ ಮಾತು ಎಂದು ಡಾ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ. 1956ರಲ್ಲಿ ಭಾಷಾವಾರು ಪ್ರಾಂತ ರಚನೆ ಸಂದರ್ಭ ನಡೆದ ದೊಡ್ಡ ಪ್ರಮಾದದಿಂದ ಅಚ್ಚಕನ್ನಡದ ಗಡಿನಾಡಿನ ಕನ್ನಡಿಗರು ಸಂಕಷ್ಟ ಅನುಭವಿಸುವಂತಾಗಿದೆ. ಶೇ.99ಕನ್ನಡಿಗರಿದ್ದರೂ, ಕಾಸರಗೋಡನ್ನು ಕೇರಳಕ್ಕೆ ಸೇರ್ಪಡೆಗೊಳಿಸಿರುವುದು ಯಕ್ಷಪ್ರಶ್ನೆಯಾಗಿ ಉಳಿದುಕೊಂಡಿದೆ ಎಂದು ತಿಳಿಸಿದರು.

ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು.   ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್, ಸಾಹಿತಿ,ಪತ್ರಕರ್ತ ರಾಧಾಕೃಷ್ಣ.ಕೆ ಉಳಿಯತ್ತಡ್ಕ, ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ.ಮಹಮ್ಮದಾಲಿ ಅತಿಥಿಗಳಾಗಿ ಭಾಗವಹಿಸಿದ್ದರು.  ಈ ಸಂದರ್ಭ ಖ್ಯಾತ ಸಾಹಿತಿ ಡಾ ರಮಾನಂದ ಬನಾರಿ ಸಾರಥ್ಯದಲ್ಲಿ ಪ್ರಕಟಗೊಳ್ಳುತ್ತಿರುವ 'ಕನ್ನಡಿಯಲ್ಲಿ ಕನ್ನಡಿಗ 'ಕೃತಿ ಸರಣಿಯ ಆರನೇ ಸಂಚಿಕೆಯನ್ನು ಸಾಹಿತಿ, ನಿವೃತ್ತ ಪ್ರಾಧ್ಯಾಪಿಕೆ ಡಾ. ಪ್ರಮೀಳಾ ಮಾಧವ್ ಬಿಡುಗಡೆಗೊಳಿಸಿದರು. 

ಕಾರ್ಯಕ್ರಮದ ಅಂಗವಾಗಿ ಕಾಸರಗೋಡಿನ ಕನ್ನಡದ ಇತಿಹಾಸ ಮತ್ತು ಸವಾಲುಗಳ ಕುರಿತು ವಿಚಾರಗೋಷ್ಠಿಯಲ್ಲಿ ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ. ಸದಾನಂದ ಪೆರ್ಲ ಅವರು 'ಕಾಸರಗೋಡಿನ ಕನ್ನಡ ಹೋರಾಟದ ಇತಿಹಾಸ', ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ರಾಧಾಕೃಷ್ಣ ಬೆಳ್ಳೂರು ಅವರು 'ಕನ್ನಡ ಸಾಹಿತ್ಯ ಮತ್ತು ಕನ್ನಡ ಅಸ್ಮಿತೆ', ಡಾ. ಬಾಲಕೃಷ್ಣ ಹೊಸಂಗಡಿ ಅವರು'ಶೈಕ್ಷಣಿಕ ಮತ್ತು ಔದ್ಯೋಗಿಕ ಸವಾಲುಗಳು', ಡಾ. ಶ್ರೀಧರ.ಎನ್ ಅವರು'ಸಾಂಸ್ಕೃತಿಕ ಮತ್ತು ರಾಜಕೀಯ ಸವಾಲುಗಳು', ಕಾಲೇಜಿನ ಪದವಿ ವಿದ್ಯಾರ್ಥಿಗಳಾದ ಕು.ದೀಕ್ಷಿತ ಅವರು'ಕನ್ನಡ ವಿದ್ಯಾರ್ಥಿಗಳ ಸಮಸ್ಯೆಗಳು', ಅನಿರುದ್ಧ ಅವರು ಕನ್ನಡದ ಅಸ್ತಿತ್ವ-ವಿದ್ಯಾರ್ಥಿಗಳ ಪಾತ್ರ'ಎಂಬ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.  ಸಹಾಯಕ ಪ್ರಾಧ್ಯಾಪಕ ಡಾ ಸುಜೀಶ್. ಎಸ್ ಸಮನ್ವಯಕಾರರಾಗಿದ್ದರು. ಡಾ. ಕಿಶೋರ್ ಕುಮರ್ ರೈ ಶೇಣಿ ಸ್ವಾಗತಿಸಿದರು. ಉಪನ್ಯಾಸಕ ಪಿ.ಶಿವಶಂಕರ್ ಕಾರ್ಯಕ್ರಮ ನಿರೂಪಿಸಿದರು.  ವಿಶಾಲಾಕ್ಷ ಪುತ್ರಕಳ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ಮಾಃಇತಿ ಕೇಂದ್ರ ಮಾಸ್ಟರ್ ಕೋಚಿಂಗ್ ಸೆಂಟರ್ ವತಿಯಿಮದ ಆಯೋಜಿಸಲಾದ ಪುಸ್ತಕ ಪ್ರದರ್ಶನವನ್ನು ಡಾ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು.

ಸಾಂಸ್ಕೃತಿಕ ವಲಯದ  ಕನ್ನಡ ಅಸ್ಮಿತೆಯ ಕುರಿತು ಸಂವಾದ ನಡೆಯಿತು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ವಿಮರ್ಶಕ ಡಾ. ಎಸ್ .ಆರ್ ವಿಜಯಶಂಕರ್ ಬೆಂಗಳೂರು ಸಮಾರೋಪ ಭಾಷಣ ಮಡಿದರು.  ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಪೆÇ್ರ. ಪಿ .ಎನ್ ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು.   ಡಾ ಪುರುಷೋತ್ತಮ ಬಿಳಿಮಲೆ ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries