ಕಾಸರಗೋಡು: ನಗರದ ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ನಡಾವಳಿ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆದು, ನಂತರ ಉಗ್ರಾಣ ಮುಹೂರ್ತ ನೆರವೇರಿತು.
ಮಂಗಳವಾರ ಚಂಡಿಕಾ ಹೋಮ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು
25ರಂದು ಬೆಳಗ್ಗೆ ಉದಯಾಸ್ತಮಾನ ಭಜನಾರ್ಚನೆ ಆರಂಭ, ಸಂಜೆ 6ಕ್ಕೆ ಉಲ್ಪೆ ಮೆರವಣಿಗೆ, 26ರಂದು ಬೆಳಗ್ಗೆ10.30ಕ್ಕೆ ಸರ್ವೈಶ್ವರ್ಯ ಬೆಳಕಿನ ಪೂಜೆ ನಡೆಯುವುದು. 27ರಂದು ಬೆಳಗ್ಗೆ6ಕ್ಕೆ ಗಣಹೋಮ, ಶ್ರೀ ಚೀರುಂಬಾ ಭಗವತೀ ಹಾಗೂ ಪರಿವಾರ ದೇವತೆಗಳಿಗೆ ಬ್ರಹ್ಮಕಲಶೋತ್ಸವ, 11.30ಕ್ಕೆ ಶ್ರೀದೇವರ ನೃತ್ಯ ಬಲಿ ಉತ್ಸವ ನಡೆಯುವುದು. ಸಂಜೆ 6ರಿಂದ ಶ್ರೀಲಲಿತಾಸಹಸ್ರನಾಮಾವಳಿ, ಭಂಡಾರ ಮೆರವಣಿಗೆ,ರಾತ್ರಿ 9.30ಕ್ಕೆ ಶ್ರೀದೇವರ ನೃತ್ಯಬಲಿ ಉತ್ಸವ ನಡೆಯುವುದು. ಮಾ. 1ರಂದು ನಡಾವಳಿ ಉತ್ಸವ ಸಂಪನ್ನಗೊಳ್ಳಲಿದೆ.


