ಕಾಸರಗೋಡು: ನಗರದ ಕೋಟೆಕಣಿ ಶ್ರೀ ರಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ 'ಕಾಸರಗೊಡು ಕನ್ನಡ ಹಬ್ಬ' ಫೆ. 26ರಂದು ಸಂಜೆ 5ಕ್ಕೆ ಕೋಟೆಕಣಿ ಶ್ರೀರಾಮನಾಥ ಸಾಂಸ್ಕøತಿಕ ಭವನದಲ್ಲಿ ಜರುಗಲಿದೆ.
ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಪ್ಪ ಮಂಜೇಶ್ವರ ಸಮಾರಂಭ ಉದ್ಘಾಟಿಸುವರು. ಸತ್ಯನಾರಾಯಣ ತಂತ್ರಿ ಅಧ್ಯಕ್ಷತೆ ವಹಿಸುವರು. ಶಿವರಾಮ ಕಸರಗೋಡು, ಸೌಮ್ಯಾ ಶ್ರೀಕಾಂತ್ ಮಧೂರು ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದ ಅಂಗವಾಗಿ ಕರಾವಳಿ ಜಾನಪದ ನೃತ್ಯ, ಜಾನಪದ ಹಾಡು, ಭಾವಗೀತೆ, ಕನ್ನಡ ನಾಡಗೀತೆ, ಬರತನಾಟ್ಯ ಪ್ರದರ್ಶನಗೊಳ್ಳುವುದು. ಸೌಮ್ಯಾಶ್ರೀಕಾಂತ್ ಶಿಷ್ಯವೃಂದದಿಂದ ಜಾಣಪದ ನೃತ್ಯ, ವಿದುಷಿ ಅಂಕಿತಾ ಬದಿಯಡ್ಕ ಅವರಿಂದ ಭರತನಾಟ್ಯವೈಭವ, ದಿವಾಕರ ಪಿ.ಅಶೋಕನಗರ ಬಳಗದವರಿಂದ ಭಾವಗೀತೆ ಸಂಗಮ ನಡೆಯಲಿದೆ.


