: ನೀರ್ಚಾಲು ಸನಿಹದ ಬೇಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬದಿಯಡ್ಕ ಠಾಣೆ ಪೆÇಲೀಸರು ನಡೆಸಿದ ದಾಳಿಯಲ್ಲಿ ಏಳು ಮಂದಿಯನ್ನುಬಂಧಿಸಿದ್ದಾರೆ. ಇವರಿಂದ ಏಳು ಅಂಕದ ಕೋಳಿ, 3400ರೂ. ನಗದು ವಶಪಡಿಸಿಕೊಂಡಿದ್ದಾರೆ.
ಬದಿಯಡ್ಕ ಠಾಣೆ ಎಸ್. ಐ. ಸವ್ಯಸಾಚಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಬೇಳ ವಿಷ್ಣುಮೂರ್ತಿ ನಗರದ ಬಿ. ಅನಿಲ್ ಕುಮಾರ್, ಡಿ. ಉದಯಕುಮಾರ್,
ಪುತ್ತಿಗೆ ಕಿನ್ನಿಮಜಲು ನಿವಾಸಿ ನಾರಾಯಣ, ಬೇಳ ಕುಮಾರಮಂಗಲದ ರವಿರಾಜ, ಬೇಳ ವಿಷ್ಣುಮೂರ್ತಿ ನಗರದ ನಾರಾಯಣ ರೈ, ಚೌಕಾರು ನಿವಾಸಿ ಅಕ್ಷಯ್, ನಿತೀಶ್ ಕುಮಾರ್ ಬಿ ಬಂಧಿತರು. ನಂತರ ಇವರನ್ನು ಠಾಣೆಯಿಮದ ನೋಟೀಸು ನೀಡಿಬಿಡುಗಡೆಗೊಳಿಸಲಾಗಿದೆ.

