HEALTH TIPS

ಈ ಆಯಪ್ ನಿಮ್ಮ ಫೋನ್‌ನಲ್ಲಿದ್ದರೆ ಡೇಟಾ ಲೀಕ್ ಸಾಧ್ಯತೆ ಹೆಚ್ಚು, ಎಚ್ಚರಿಕೆ ಅಗತ್ಯ

ಈ  ಆಯಪ್ ನಿಮ್ಮ ಫೋನ್‌ನಲ್ಲಿದ್ದರೆ ಡೇಟಾ ಲೀಕ್ ಸಾಧ್ಯತೆ ಹೆಚ್ಚು, ಎಚ್ಚರಿಕೆ ಅಗತ್ಯ, ನೆಚ್ಚಿನ ಫೋಟೋ, ಬ್ಯಾಂಕ್ ಖಾತೆ ಸೇರಿದಂತೆ ಹಲವು ರಹಸ್ಯ ಮಾಹಿತಿಗಳು ಸೋರಿಕೆಯಾಗವು ಸಾಧ್ಯತೆಗಳಿವೆ. ಹೀಗಾಗಿ ಕೆಲ ಆಯಪ್ ಬಗ್ಗೆ ಎಚ್ಚರ ಅಗತ್ಯ.

ರಹಸ್ಯ ಮಾಹಿತಿಗಳಿಂದ ಹಿಡಿದು ಎಲ್ಲವೂ ಫೋನ್‌ನಲ್ಲೇ ಸ್ಟೋರ್ ಆಗಿರುತ್ತದೆ.

ನಮ್ಮ ವೈಯಕ್ತಿಕ ಮಾಹಿತಿಯೆಲ್ಲಾ ಸ್ಮಾರ್ಟ್‌ಫೋನ್‌ನಲ್ಲಿರುವುದು ಸಾಮಾನ್ಯ. ಖಾಸಗಿ ಫೋಟೋ, ವಿಡಿಯೋಗಳಿಂದ ಹಿಡಿದು ರಹಸ್ಯ ಮಾಹಿತಿಯವರೆಗೆ ಎಲ್ಲವನ್ನೂ ಫೋನ್‌ನಲ್ಲೇ ಇಟ್ಟಿರುತ್ತೇವೆ. ಆದರೆ ನಮಗೆ ಗೊತ್ತಿಲ್ಲದಂತೆ ನಮ್ಮ ಡೇಟಾ ಸೋರಿಕೆಯಾಗಬಹುದು. ನಾವು ಇನ್‌ಸ್ಟಾಲ್ ಮಾಡುವ ಕೆಲವು ಆಯಪ್‌ಗಳು ನಮ್ಮ ಡೇಟಾವನ್ನು ಕದಿಯುವ ಸಾಧ್ಯತೆ ಹೆಚ್ಚು.

 ಉಚಿತ ವಿಪಿಎನ್ ಆಯಪ್‌ಗಳು ತುಂಬಾ ಅಪಾಯಕಾರಿ.

ವಿಪಿಎನ್ ಸಂಪರ್ಕವು ಇಂಟರ್ನೆಟ್ ಅನ್ನು ಖಾಸಗಿಯಾಗಿ ಬ್ರೌಸ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಆದರೆ, ಉಚಿತ ವಿಪಿಎನ್​ಗಳು ನಿಮ್ಮ ಬ್ರೌಸಿಂಗ್ ಡೇಟಾವನ್ನು ತಮ್ಮ ಸರ್ವರ್‌ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುತ್ತವೆ. ನಂತರ ಇದನ್ನು ಮಾರಿ ಹಣ ಮಾಡಿಕೊಳ್ಳಬಹುದು. ಫ್ಲ್ಯಾಶ್‌ಲೈಟ್, ಕ್ಲೀನರ್, ಬೂಸ್ಟರ್‌ನಂತಹ ಆಯಪ್‌ಗಳು ಕೂಡ ಅಪಾಯಕಾರಿ. ಈಗಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಬಿಲ್ಟ್ ಫ್ಲ್ಯಾಶ್‌ಲೈಟ್ ಇರುತ್ತದೆ.

ಆದರೂ, ಥರ್ಡ್-ಪಾರ್ಟಿ ಫ್ಲ್ಯಾಶ್‌ಲೈಟ್ ಆಯಪ್‌ಗಳು ಲಭ್ಯವಿವೆ. ಇವು ನಿಮ್ಮ ಡೇಟಾವನ್ನು ಕದಿಯುವ ಸಾಧ್ಯತೆ ಹೆಚ್ಚು. ಉಚಿತ ಕ್ಲೀನರ್ ಆಯಪ್‌ಗಳು ಫೋನ್ ಕ್ಲೀನ್ ಮಾಡುವುದರ ಜೊತೆಗೆ, ಬ್ರೌಸಿಂಗ್ ಡೇಟಾ ಸೇರಿ ಸೂಕ್ಷ್ಮ ಮಾಹಿತಿ ಕದಿಯುತ್ತವೆ ಎನ್ನುತ್ತಾರೆ ತಜ್ಞರು. ಫೇಸ್ ಫಿಲ್ಟರ್, ಫೋಟೋ ಮತ್ತು ವಿಡಿಯೋ ಎಡಿಟಿಂಗ್ ಆಯಪ್‌ಗಳು ಈಗ ಬಹಳ ಜನಪ್ರಿಯ. ಜನರು ತಮ್ಮ ರೀಲ್ಸ್ ವಿಡಿಯೋ, ಫೋಟೋಗಳನ್ನು ಎಡಿಟ್ ಮಾಡಲು ಇಂತಹ ಆಯಪ್‌ಗಳನ್ನು ಹೆಚ್ಚು ಬಳಸುತ್ತಾರೆ.

ಈ ಆಯಪ್‌ಗಳ ಮೂಲಕ ನಿಮ್ಮ ಮುಖದ ಡೇಟಾ ಅವರ ಸರ್ವರ್‌ಗಳನ್ನು ತಲುಪುತ್ತದೆ. ಕೆಲವು ಆಯಪ್‌ಗಳು ಎಲ್ಲದಕ್ಕೂ ಅನುಮತಿ ಕೇಳುತ್ತವೆ. ಫೋಟೋ, ಫೋನ್ ಕಾಲ್, ಸೆಟ್ಟಿಂಗ್ಸ್, ಕ್ಯಾಮೆರಾ, ಮೆಸೇಜ್, ಬ್ರೌಸಿಂಗ್ ಡೇಟಾ ಹೀಗೆ ಎಲ್ಲವನ್ನೂ ಆಯಕ್ಸೆಸ್ ಮಾಡಲು ಪರ್ಮಿಷನ್ ಕೇಳುತ್ತವೆ. ಒಂದು ಫೋಟೋ ಎಡಿಟಿಂಗ್ ಆಯಪ್‌ಗೆ ನಿಮ್ಮ ಮೆಸೇಜ್ ಯಾಕೆ ಬೇಕು? ಹಾಗಾಗಿ, ಆಯಪ್‌ಗಳು ಅನುಮತಿ ಕೇಳಿದಾಗ, ಎಲ್ಲದಕ್ಕೂ ಅಲೋ ಮಾಡಬೇಡಿ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries