ಕಾಸರಗೋಡು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಓ.ಆರ್. ಕೇಳು ಅವರು ಫೆ. 6ರಂದು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಕಾಸರಗೋಡು ನಗರದ ಎಸ್.ಸಿ ಎಸ್.ಟಿ ಕಾಪೆರ್Çರೇಷನ್ ಕಚೇರಿ ಉದ್ಘಾಟನೆ, 11ಕ್ಕೆ ಸಾವಿತ್ರಿಭಾಯಿ ಫುಲೆ ಎಂ. ಆರ್. ಎಸ್. ಅಕಾಡೆಮಿಕ್ ಬ್ಲಾಕ್ ಕಟ್ಟಡದ ಉದ್ಘಾಟನೆ ನಡೆಸುವರು. ಮಧ್ಯಾಹ್ನ 2.30ಕ್ಕೆ ಪಡನ್ನಕ್ಕಾಡ್‍ನಲ್ಲಿರುವ ನೆಹರು ಕಾಲೇಜಿಗೆ ಭೇಟಿ, 3.30ಕ್ಕೆ ನೀಲೇಶ್ವರದಲ್ಲಿರುವ ಕೊಟ್ಟಾಪುರಂ ಜಿ.ಎಚ್.ಎಸ್.ಎಸ್ ಕಟ್ಟಡದ ಉದ್ಘಾಟನೆ, ಸಂಜೆ 4.30ಕ್ಕೆ ಚೆರುವತ್ತೂರು ಅಂಬೇಡ್ಕರ್ ಗ್ರಾಮವನ್ನು ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.

