ಕಾಸರಗೋಡು: ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ ವತಿಯಿಂದ 'ಶತಮಾನದ ಮೂಲಕ ಆದರ್ಶ ಪರಿಶುದ್ಧತೆ'ಎಂಬ ವಿಷಯದೊಂದಿಗೆ ಆಯೋಜಿಸಿರುವ 100ನೇ ವರ್ಷದ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ರಾಷ್ಟ್ರೀಯ ಹೆದ್ದಾರಿ ಚಟ್ಟಂಚಾಲ್ ಸನಿಹದ ಕುಣಿಯ ವರಕ್ಕಲ್ ಮುಳ್ಳಕೋಯ ತಂಗಳ್‍ನಗರದಲ್ಲಿ ಅದ್ದೂರಿಯ ಚಾಲನೆ ನೀಡಲಾಯಿತು.
ಪಾಣಕ್ಕಾಡ್ ಸೈಯದ್ ಸಾದಿಕಾಲಿ ಶಿಹಾಬ್ ತಙಳ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, 'ಸಮಸ್ತ'ನಮ್ರತೆಯಿಂದ ಬದುಕುವ ತತ್ವವನ್ನು ಬೋಧಿಸಿದ್ದು, ಜ್ಞಾನ ಮತ್ತು ನಂಬಿಕೆಯ ಮೂಲಕ ನಡೆದುಬಂದಿರುವ ಮಹಾಸಂಘಟನೆಯಾಗಿದೆ. ಸಮಸ್ತ ಸಂಸ್ಥೆಗಳಿಂದ ಪದವಿ ಪಡೆದವರು ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಸಂಘಟನೆ ಅತ್ಯಂತ ಕಠಿಣ ಹಾದಿಯಲ್ಲಿ ಬೆಳೆದು ಬಂದಿದ್ದು, ಇಂದು ಹೆಮ್ಮರವಾಗಿಬೆಳೆದು ನಿಂತಿರುವುದಾಘಿ ತಿಳಿಸಿದರು.
ಸಮಸ್ತ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಙಲ್ ಅಧ್ಯಕ್ಷತೆ ವಹಿಸಿದ್ದರು. ಅಲಿ ತಙಳ್ ಕುಂಬೋಲ್ ಪ್ರಾರ್ಥನೆಗೆ ನೇತೃತ್ವ ವಹಿಸಿದರು. ಸಮಸ್ತ ಕೋಶಾಧಿಕಾರಿ ಪಿ.ಪಿ. ಉಮರ್ ಮುಸ್ಲಿಯಾರ್ ಕೊಯ್ಯೋಟ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕೈರೋ ಇಸ್ಲಾಮಿಕ್ ರಿಸರ್ಚ್ ಅಸೆಂಬ್ಲಿಯ ಪ್ರಧಾನ ಕಾರ್ಯದರ್ಶಿ ಡಾ. ಮುಹಮ್ಮದ್ ಅಬ್ದುಲ್-ದಾಯಿಮ್ ಅಲ್-ಜುಂಡಿ ಗೌರವ ಅತಿಥಿಯಾಗಿದ್ದರು. ಸಮಸ್ತ ಕೇರಳ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಮಂಡಳಿ ಪ್ರಧಾನ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಕೆ.ಹೈದರ್ ಫೈಝಿ ಪಣಂಗಾಂಗರ, ಡಾ.ಬಹಾವುದ್ದೀನ್ ಮುಹಮ್ಮದ್ ನದ್‍ವಿ, ಬಿ.ಕೆ ಅಬ್ದುಲ್ ಖಾದರ್ ಖಾಸಿಮಿ ುಪಸ್ಥಿತರಿದ್ದರು. ಉಮರ್ ಫೈಝಿ ಮುಕ್ಕಂ ಸ್ವಾಗತಿಸಿದರು.
ಈ ಸಂದರ್ಭ ಸಮಸ್ತ ಇ-ಲರ್ನಿಂಗ್ ಸ್ಮಾರ್ಟ್ ಮದರಸಾ ಅಪ್ಲಿಕೇಶನ್ ಮತ್ತು ಎಸ್‍ವೈಎಸ್ ಸ್ಮೈಲ್ ವಿಲೇಜನ್ನು ಸಾದಿಕಲಿ ಶಿಹಾಬ್ ತಙಳ್ ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಸ್ವಾಗತ ಕೋಶದ ಕೋಶಾಧಿಕಾರಿ ಕುಣಿಯ ಇಬ್ರಾಹಿಂ ಹಾಜಿ ಅವರಿಗೆ ಪಾಣಕ್ಕಾಡ್ ಅಬ್ಬಾಸಾಲಿ ತಂಗಳು ಉಡುಗೊರೆ ನೀಡಿ ಗೌರವಿಸಿದರು. ಅನ್ವರ್ ಸಾದಿಕ್ ಫೈಝಿ ಸಮಸ್ತ ಶತಮಾನೋತ್ಸವ ಸ್ಮರಣಿಕೆಯನ್ನು ಪರಿಚಯಿಸಿದರು.
ಶಾಸಕ ಸಿ.ಎಚ್ ಕುಞಂಬು ಅವರು ಸಮಸ್ತ ಶತಮಾನೋತ್ಸವ ಸಂದರ್ಭದಲ್ಲಿ ಬಿಡುಗಡೆಯಾದ ಪುಸ್ತಕವನ್ನು ಅಬ್ದುಲ್ ಮಜೀದ್ ಹಾಜಿ ಕುತ್ತಿಕೋಲ್ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಸಂಸದ ರಾಜಮೋಹನ್ ಉನ್ನಿಥಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ. ಅಶ್ರಫ್ ಮತ್ತು ಚೆಂಗಳ ಅಬ್ದುಲ್ಲಾ ಫೈಝಿ ಮೊದಲಾದವರು ಉಪಸ್ಥಿತರಿದ್ದರು. ಸಮಸ್ತದ ನೂರನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸಮ್ಮೇಳನ ನಗರಿಯಲ್ಲಿ ನೂರು ಧ್ವಜಗಳನ್ನು ಏಕ ಕಾಲಕ್ಕೆ ಏರಿಸಲಾಯಿತು.
¥



