HEALTH TIPS

ರಶ್ಯ-ಅಮೆರಿಕ ಕೊನೆಯ ಪರಮಾಣು ಒಪ್ಪಂದ ಮುಕ್ತಾಯ: ಹೊಸ ಶಸ್ತ್ರಾಸ್ತ್ರ ಸ್ಪರ್ಧೆಯ ಭೀತಿಗೆ ನಾಂದಿ

ಮಾಸ್ಕೋ: ರಶ್ಯ ಮತ್ತು ಅಮೆರಿಕಾ ನಡುವಿನ ಕೊನೆಯ ಪರಮಾಣು ಒಪ್ಪಂದ ಗುರುವಾರ ಮುಕ್ತಾಯಗೊಂಡಿದ್ದು ಅರ್ಧ ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಎರಡು ದೊಡ್ಡ ಪರಮಾಣು ಶಸ್ತ್ರಾಗಾರಗಳ ಮೇಲಿನ ಮುಚ್ಚಳವನ್ನು ತೆಗೆದು ಹಾಕಲಾಗಿದೆ.

ಎರಡು ಜಾಗತಿಕ ಶಕ್ತಿಗಳ ನಡುವಿನ ಕೊನೆಯ ಪರಮಾಣು ಒಪ್ಪಂದ, `ನ್ಯೂ ಸ್ಟಾರ್ಟ್' ಒಪ್ಪಂದವು ಗುರುವಾರ ಕೊನೆಗೊಂಡಿದ್ದು ರಶ್ಯ ಮತ್ತು ಅಮೆರಿಕಾಗಳನ್ನು ತಮ್ಮ ಪರಮಾಣು ಶಸ್ತ್ರಾಗಾರಗಳ ಮೇಲಿನ ನಿರ್ಬಂಧಗಳ ನಿಯಂತ್ರಣದಿಂದ ಅಧಿಕೃತವಾಗಿ ಬಿಡುಗಡೆ ಮಾಡಿದೆ ಮತ್ತು ಜಾಗತಿಕ ಶಸ್ತ್ರಾಸ್ತ್ರ ಸ್ಪರ್ಧೆಯ ಭಯವನ್ನು ಪ್ರಚೋದಿಸಿದೆ.

ಅಮೆರಿಕಾ ಸಿದ್ದವಿದ್ದರೆ ಒಪ್ಪಂದದ ಮಿತಿಯನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಲು ರಶ್ಯವೂ ಸಿದ್ದವಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕಳೆದ ವರ್ಷ ಘೋಷಿಸಿದ್ದರು. ಆದರೆ ವಿಸ್ತರಿಸುವ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಂದಿಸಲಿಲ್ಲ. ಒಪ್ಪಂದ ಅಂತ್ಯಗೊಳ್ಳುವ ವಿಷಯದ ಬಗ್ಗೆ ಬುಧವಾರ ಪುಟಿನ್ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು ರಶ್ಯವು ಭದ್ರತಾ ಪರಿಸ್ಥಿತಿಯ ಸಂಪೂರ್ಣ ವಿಶ್ಲೇಷಣೆಯ ಆಧಾರದ ಮೇಲೆ ಸಮತೋಲಿತ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ರಶ್ಯ ಅಧ್ಯಕ್ಷರ ಸಲಹೆಗಾರ ಯೂರಿ ಉಷಕೋವ್ ಹೇಳಿದ್ದಾರೆ.

ಪ್ರಸ್ತುತ ಸಂದರ್ಭಗಳಲ್ಲಿ `ನ್ಯೂ ಸ್ಟಾರ್ಟ್(ಎಸ್‍ಟಿಎಆರ್‍ಟಿ) ಒಪ್ಪಂದದ ಪಕ್ಷಗಳು ಅದರ ಪ್ರಮುಖ ನಿಬಂಧನೆಗಳನ್ನು ಒಳಗೊಂಡಂತೆ ಒಪ್ಪಂದದ ಸಂದರ್ಭದಲ್ಲಿ ಯಾವುದೇ ಕಟ್ಟುಪಾಡುಗಳು ಮತ್ತು ಅಥವಾ ಸಮಸೂತ್ರತೆ ಘೋಷಣೆಗಳಿಗೆ ಇನ್ನು ಮುಂದೆ ಬದ್ಧರಾಗಿರುವುದಿಲ್ಲ ಮತ್ತು ಅವರ ಮುಂದಿನ ಹಂತಗಳನ್ನು ಆಯ್ಕೆ ಮಾಡಲು ಮೂಲಭೂತವಾಗಿ ಸ್ವತಂತ್ರರಾಗಿರುತ್ತಾರೆ ಎಂದು ನಾವು ಭಾವಿಸುತ್ತೇವೆ' ಎಂದು ರಶ್ಯದ ವಿದೇಶಾಂಗ ಇಲಾಖೆ ಹೇಳಿದೆ.

2010ರಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ರಶ್ಯದ ಅಧ್ಯಕ್ಷರಾಗಿದ್ದ ಡಿಮಿಟ್ರಿ ಮೆಡ್ವೆಡೇವ್ ಸಹಿ ಹಾಕಿದ್ದ `ನ್ಯೂ ಎಸ್‍ಟಿಎಆರ್‍ಟಿ ಒಪ್ಪಂದವು 700ಕ್ಕಿಂತ ಹೆಚ್ಚು ಕ್ಷಿಪಣಿ ಮತ್ತು ಬಾಂಬರ್‌ಗಳಲ್ಲಿ ಗರಿಷ್ಠ 1,550 ಪರಮಾಣು ಸಿಡಿತಲೆಗಳಿಗೆ ಎರಡೂ ರಾಷ್ಟ್ರಗಳನ್ನು ನಿರ್ಬಂಧಿಸಿದೆ. ಇದು ಮೂಲತಃ 2021ರಲ್ಲಿ ಮುಕ್ತಾಯಗೊಳ್ಳಬೇಕಿತ್ತು, ಆದರೆ ಐದು ವರ್ಷ ವಿಸ್ತರಿಸಲಾಗಿತ್ತು. ಒಪ್ಪಂದದ ಅನುಸರಣೆಯನ್ನು ಪರಿಶೀಲಿಸಲು ವ್ಯಾಪಕವಾದ ಆನ್‍ಸೈಟ್ (ಕಾರ್ಯಸ್ಥಳದಲ್ಲೇ) ತಪಾಸಣೆಗೆ ಅವಕಾಶವಿದೆ. ಆದರೆ 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆನ್‍ಸೈಟ್ ತಪಾಸಣೆ ಸ್ಥಗಿತಗೊಂಡಿದ್ದು ಬಳಿಕ ಪುನರಾರಂಭಗೊಂಡಿಲ್ಲ.

ಐದು ದಶಕಗಳಿಗೂ ಹೆಚ್ಚು ಕಾಲ ಶಸ್ತ್ರಾಸ್ತ್ರ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಮುಖ ಒಪ್ಪಂದದ ಅವಸಾನವು ಜಾಗತಿಕ ಅಸ್ಥಿರತೆ ಹೆಚ್ಚುತ್ತಿರುವ ಸಮಯದಲ್ಲಿ ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ. ಜೊತೆಗೆ, ಈ ವರ್ಷ ಮರುಪರಿಶೀಲನೆಗೆ ಒಳಪಡಲಿರುವ 1970ರ `ಪರಮಾಣು ಪ್ರಸರಣ ತಡೆ ಒಪ್ಪಂದ' (ಎನ್‍ಪಿಟಿ)ಕ್ಕೂ ಬೆದರಿಕೆ ಒಡ್ಡಿದೆ.

ಅಮೆರಿಕ-ರಶ್ಯ ಪರಮಾಣು ಒಪ್ಪಂದ ಅಂತ್ಯಕ್ಕೆ ವಿಶ್ವಸಂಸ್ಥೆ ಕಳವಳ

ಅಮೆರಿಕ ಮತ್ತು ರಶ್ಯ ನಡುವಿನ ಪರಮಾಣು ಒಪ್ಪಂದ ಅಂತ್ಯಗೊಂಡಿರುವುದು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಗಂಭೀರ ಕ್ಷಣವಾಗಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕಳವಳ ವ್ಯಕ್ತಪಡಿಸಿದ್ದು ತಕ್ಷಣ ಪರಮಾಣು ಶಸ್ತ್ರ ನಿಯಂತ್ರಣದ ಕುರಿತ ಹೊಸ ಒಪ್ಪಂದಕ್ಕೆ ಸಹಿ ಹಾಕುವಂತೆ ಎರಡೂ ದೇಶಗಳನ್ನು ಆಗ್ರಹಿಸಿದ್ದಾರೆ.

`ಅರ್ಧ ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ, ಮೊದಲ ಬಾರಿಗೆ ನಾವು ಜಾಗತಿಕ ಪರಮಾಣು ಶಸ್ತ್ರಾಸ್ತ್ರಗಳ ಬಹುಪಾಲು ಸಂಗ್ರಹವನ್ನು ಹೊಂದಿರುವ ಎರಡು ರಾಷ್ಟ್ರಗಳ ಕಾರ್ಯತಂತ್ರದ ಪರಮಾಣು ಶಸ್ತ್ರಾಗಾರಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲದ ಜಗತ್ತನ್ನು ಎದುರಿಸುತ್ತಿದ್ದೇವೆ' ಎಂದು ಗುಟೆರಸ್ ಹೇಳಿದ್ದಾರೆ.

`ನ್ಯೂ ಸ್ಟಾರ್ಟ್(ಎಸ್‍ಟಿಎಆರ್‍ಟಿ) ಹಾಗೂ ಇತರ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದಗಳು ಎಲ್ಲಾ ಜನರ ಭದ್ರತೆಯನ್ನು ಗಮನಾರ್ಹವಾಗಿ ಸುಧಾರಿಸಿವೆ. ದಶಕಗಳ ಸಾಧನೆಯನ್ನು ಪರಮಾಣು ಶಸ್ತ್ರ ಬಳಕೆಯ ಅಪಾಯ ದಶಕಗಳಲ್ಲೇ ಅತೀ ಹೆಚ್ಚಾಗಿರುವ ಈ ನಿರ್ಣಾಯಕ ಸಮಯದಲ್ಲಿ ವ್ಯರ್ಥಗೊಳಿಸಲು ಸಾಧ್ಯವಿಲ್ಲ' ಎಂದು ಗುಟೆರಸ್ ಹೇಳಿದ್ದು, ಉಕ್ರೇನ್ ಯುದ್ದದ ಆರಂಭದಲ್ಲಿ ಕಾರ್ಯತಂತ್ರದ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ರಶ್ಯದ ಹೇಳಿಕೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ವಿಶ್ವದ ಪರಮಾಣು ಸಿಡಿತಲೆಗಳಲ್ಲಿ 80%ಕ್ಕಿಂತ ಹೆಚ್ಚು ರಶ್ಯ ಮತ್ತು ಅಮೆರಿಕಾದ ಹಿಡಿತದಲ್ಲಿದೆ. ತಡವಿಲ್ಲದೆ ಮಾತುಕತೆಯ ಮೇಜಿಗೆ ಮರಳಲು ಮತ್ತು ಉತ್ತರಾಧಿಕಾರಿ ಚೌಕಟ್ಟನ್ನು ಒಪ್ಪಿಕೊಳ್ಳುವಂತೆ ಗುಟೆರಸ್ ಎರಡೂ ದೇಶಗಳನ್ನು ಆಗ್ರಹಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries