HEALTH TIPS

ಭಾರತದ ಮೊದಲ 'ಮ್ಯೂಸಿಕಲ್ ರೋಡ್‌' ಹೇಗಿದೆ ನೋಡಿ..

ಮುಂಬೈ: ಮುಂಬೈನ ಕರಾವಳಿ ರಸ್ತೆ ಈಗ ಸಾಮಾನ್ಯ ರಸ್ತೆಯಾಗಿಲ್ಲ. ಬದಲಾಗಿ ಮ್ಯೂಸಿಕಲ್‌ ರಸ್ತೆಯಾಗಿ ಮಾರ್ಪಟ್ಟಿದೆ. ಇಲ್ಲಿ ಪ್ರಯಾಣದ ಜೊತೆಗೆ ಹಾಡನ್ನೂ ಕೇಳಬಹುದು. ಭಾರತದ ಮೊದಲ 'ಸಂಗೀತ ರಸ್ತೆ'ಯಾಗಿರುವ ಈ ರಸ್ತೆಯನ್ನು ಇದೇ ಫೆಬ್ರುವರಿ 11ರಂದು ಉದ್ಘಾಟಿಸಲಾಗಿದೆ. ಹಾಗಾದರೆ ಈ ರಸ್ತೆಯ ವಿಶೇಷತೆಗಳೇನು, ಯಾವ ಹಾಡನ್ನು ಕೇಳಬಹುದು, ಇದರ ಹಿನ್ನೆಲೆ ಏನು ಎಂಬ ಮಾಹಿತಿ ಇಲ್ಲಿದೆ.

ಬೃಹನ್‌ಮುಂಬೈ ಮಹಾನಗರ ಪಾಲಿಕೆ ಅಡಿಯಲ್ಲಿ ಈ ರಸ್ತೆ ನಿರ್ಮಾಣವಾಗಿದೆ. ನರೀಮನ್ ಪಾಯಿಂಟ್‌ನಿಂದ ವರ್ಲಿ ಕಡೆಗೆ ಸಂಪರ್ಕಿಸುವ ರಸ್ತೆಯಲ್ಲಿ 500 ಮೀ. ಉದ್ದದ ಈ ವಿಶೇಷ ಸಂಗೀತ ರಸ್ತೆಯನ್ನು ನಿರ್ಮಿಸಲಾಗಿದೆ. ಚಾಲಕರು ಈ ರಸ್ತೆಯಲ್ಲಿ ಗಂಟೆಗೆ 70 ರಿಂದ 80 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಿದಾಗ ಟೈಯರ್‌ಗಳ ಘರ್ಷಣೆಯಿಂದ 'ಜೈ ಹೋ' ಹಾಡು ಮೊಳಗುತ್ತದೆ.

ಹಂಗೇರಿಯನ್ ತಂತ್ರಜ್ಞಾನ ಬಳಸಿ ಈ ಸಂಗೀತ ರಸ್ತೆಯನ್ನು ವಿನ್ಯಾಸಗೊಳಿಸಲಾಗಿದೆ. ರಸ್ತೆ ಮೇಲೆ ರಬ್ಬರ್‌ನ ಸ್ಟ್ರಿಪ್ಸ್‌ಗಳನ್ನು ಅಳವಡಿಸಲಾಗಿದ್ದು, ವಾಹನಗಳು ಇದರ ಮೇಲೆ ವೇಗದಿಂದ ಚಲಿಸಿದಾಗ ಕಂಪನ ಉಂಟಾಗುತ್ತದೆ. ಇದರಿಂದಾಗಿ ಸಂಗೀತ ಮೊಳಗುತ್ತದೆ.

ಸಂಗೀತ ರಸ್ತೆ ಸಮೀಪಿಸುತ್ತಿರುವುದು ಚಾಲಕರ ಗಮನಕ್ಕೆ ತರುವ ಉದ್ದೇಶದಿಂದ ಸಂಗೀತ ರಸ್ತೆಗೆ 500 ಮೀ. ಅಂತರವಿದೆ. 100 ಮೀ., 50 ಮೀ. ಎಂಬ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇದರರಿಂದ ಚಾಲಕರು ನಿಗದಿತ ವೇಗದಲ್ಲಿ ಚಲಿಸಲು ಸಹಕಾರಿಯಾಗಿದೆ.

ಸಂಗೀತ ರಸ್ತೆಗಳ ಪರಿಕಲ್ಪನೆ ಮೊದಲು ಜಪಾನ್‌ನಲ್ಲಿ ಆರಂಭವಾಯಿತು. ಇದನ್ನು ಅಲ್ಲಿನ ಎಂಜಿನಿಯರ್‌ ಶಿಜುವೊ ಶಿನೋಡಾ ಅವರು 2007ರಲ್ಲಿ ಅಲ್ಲಿನ ರಸ್ತೆಗಳಲ್ಲಿ ಇಂಥದ್ದೊಂದು ತಂತ್ರಜ್ಞಾನವನ್ನು ಅಳವಡಿಸಿದರು. ಅಂದಿನಿಂದ ಇದೇ ರೀತಿಯ ಪ್ರಯೋಗಗಳನ್ನು ಹಂಗೇರಿ, ಜಪಾನ್, ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ದೇಶಗಳಲ್ಲಿ ಅಳವಡಿಸಲಾಗಿದೆ.

ಸಂಚಾರ ದಟ್ಟಣೆ ಕಡಿಮೆ ಮಾಡುವ ಮತ್ತು ವೇಗದ ಪ್ರಯಾಣವನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿರುವ ಮೂಲಸೌಕರ್ಯಗಳುಳ್ಳ ಈ ರಸ್ತೆ ಚಾಲಕರಿಗೆ ವಿಶಿಷ್ಟ ಅನುಭವ ನೀಡುತ್ತದೆ ಪಾಲಿಕೆಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries