HEALTH TIPS

ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 'ಸಂಶೋಧನಾ ತರಂಗ' ಉಪನ್ಯಾಸ ಮಾಲಿಕೆ

ಕಾಸರಗೋಡು: ಸಂಶೋಧನಾ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಹಾಗೂ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥ ಡಾ. ಪ್ರವೀಣ ಪದ್ಯಾಣ ತಿಳಿಸಿದ್ದರೆ.

ಅವರು ಕನ್ನಡ ವಿಭಾಗದಿಂದ ಆಯೋಜಿಸಲಾದ'ಸಂಶೋಧನಾ ತರಂಗ' ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾಲಿಕೆಯ ಮೊದಲ ತರಂಗದ ಸಂಪನ್ಮೂಲ ವ್ಯಕ್ತಿ, ಸಂಶೋಧನಾರ್ಥಿ ಶಶಾಂಕ್ ಹೆಚ್. ವಿ  ಅವರು "ಡಾ. ಎಸ್. ಎಲ್ ಭೈರಪ್ಪನವರ ಆತ್ಮಕಥೆ ಭಿತ್ತಿ: ನೆಲೆ, ಬೆಲೆ" ಎಂಬ ವಿಷಯದ ಕುರಿತು ಮಾತನಾಡಿ, ಭೈರಪ್ಪನವರ ಆತ್ಮಕಥೆ ಭಿತ್ತಿಯು ವ್ಯಕ್ತಿಜೀವನದ ವಿವರಗಳೊಂದಿಗೆ, ಸ್ವಾತಂತ್ರ್ಯ ಸಂಗ್ರಾಮ, ಸ್ವಾತಂತ್ರ್ಯೋತ್ತರ ಭಾರತ, ತುರ್ತುಪರಿಸ್ಥಿತಿಯ ವಿಪ್ಲವ ಮುಂತಾದ ಅನೇಕ ಸಾಮಾಜಿಕ, ರಾಜಕೀಯ ಐತಿಹಾಸಿಕ ಘಟನೆಗಳನ್ನೂ ತನ್ನ ಒಡಲಲ್ಲಿ ಇರಿಸಿಕೊಂಡಿದೆ ಎಂದು ತಿಳಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಗೋವಿಂದ ರಾಜು ಕೆ. ಎಂ. ಮತ್ತು ಶ್ರೀ ಚೇತನ್ ಮುಂಡಾಜೆ ಉಪಸ್ಥಿತರಿದ್ದರು.

ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದರು. ಸೈಯದ್ ನದೀಮ್, ಚೇತನಾ, ಸೋಮ ನಿಂಗ ಹಿಪ್ಪರಗಿ ಆಶಯ ಗೀತೆ ಹಾಡಿದರು. ಶೃತಿ ಸ್ವಾಗತಿಸಿದರು. ಚೇತನ ಕೆ ಅವರು ಕಾರ್ಯಕ್ರಮ ನಿರೂಪಿಸಿದರು.  ಸಹನಾ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries