ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ 41ನೇ ವಾರ್ಷಿಕೋತ್ಸವ, ಶಿವರಾತ್ರಿ ಭಜನೆ ಹಾಗೂ ಶತರುದ್ರಾಭಿಷೇಕ ಮತ್ತು ಬಲಿವಾಡುಕೂಟ ಫೆ. 15ರಂದು ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಲಿದೆ.ಶ್ರೀ ಮಹಾಳಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಲಿದೆ.
15ರಂದು ಮಧ್ಯಾಹ್ನ ಶತರುದ್ರಾಭಿಷೇಕ, ಬಲಿವಾಡು ಕೂಟ ನಡೆಯುವುದು. ಸಂಜೆ 6.35ಕ್ಕೆ ದೀಪ ಪ್ರತಿಷ್ಠೆಯೊಂದಿಗೆ ಭಜನೆ ನಡೆಯುವುದು. ನಂತರ ವಿವಿಧ ತಂಡಗಳಿಂದ ಭಜನಾ ಸಏವೆ ನಡೆಯುವುದು. ಮರುದಿನ ಬೆಳಗ್ಗೆ 6.54ಕ್ಕೆ ಸಾಮೂಹಿಕ ಭಜನೆಯೊಂದಿಗೆ ಭಜನೆಗೆ ಮಹಾಮಂಗಳ ನಡೆಯುವುದು.

