ನವದೆಹಲಿ: ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೈನ್ ಧನಸಹಾಯದಿಂದ ಸ್ಥಾಪಿಸಿದ್ದ ಎನ್ನಲಾದ ಪ್ರಶಸ್ತಿಯನ್ನು 2010ರಲ್ಲಿ ಕೇಂದ್ರದ ಆಗಿನ ಸಚಿವ ಕಪಿಲ್ ಸಿಬಲ್ ಅವರಿಗೆ ನೀಡಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಬಿಜೆಪಿ ಶನಿವಾರ ಆಗ್ರಹಿಸಿದೆ.
ಈ ಕುರಿತು ಪಕ್ಷದ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು,'ಎಪ್‌ಸ್ಟೈನ್ ಧನಸಹಾಯದಿಂದ ಸ್ಥಾಪಿಸಿದ್ದು ಎನ್ನಲಾದ ಪ್ರಶಸ್ತಿಯನ್ನು ಗಾಂಧಿ ಕುಟುಂಬಕ್ಕೆ ಆಪ್ತರಾದ ಕಪಿಲ್ ಸಿಬಲ್, 2010ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿದ್ದರು' ಎಂದು ಹೇಳಿದ್ದಾರೆ.
ಪ್ರಶಸ್ತಿ ಪುರಸ್ಕೃತ ಪಟ್ಟಿಯೊಂದನ್ನು ಕೂಡ ಭಂಡಾರಿ ಅವರು 'ಎಕ್ಸ್'ನಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸಿಬಲ್, ಸ್ಯಾಮ್ ಪಿತ್ರೋಡಾ ಹೆಸರು ಇದೆ ಎಂದು ಹೇಳಲಾಗುತ್ತಿದೆ
ಬಿಜೆಪಿಯ ಆರೋಪಗಳನ್ನು ತಳ್ಳಿಹಾಕಿರುವ ಸಿಬಲ್,'ಈ ಹೇಳಿಕೆಗಳು ಹಾಸ್ಯಾಸ್ಪದ' ಎಂದಿದ್ದಾರೆ.

