HEALTH TIPS

ಮೆಡಿಕಲ್‌ನಿಂದ ತರುವಂತಹ ಔಷಧಿ, ಮಾತ್ರೆಗಳು ನಕಲಿಯೋ, ಅಸಲಿಯೋ ಎಂದು ತಿಳಿದುಕೊಳ್ಳುವುದು ಹೇಗೆ..?

ಈಗಿನ ಮಾರ್ಕೆಟ್‌ನಲ್ಲಿ ಸಾಕಷ್ಟು ಪ್ರಾಡಕ್ಟ್‌ಗಳು ಬಂದಿದ್ದರಿಂದ ಯಾವುದು ನಕಲಿ, ಯಾವುದು ಅಸಲಿ ಎಂದು ತಿಳಿಯುವುದೆ ಕಷ್ಟ. ಎಷ್ಟೋ ಕಡೆಗಳಲ್ಲಿ ವಸ್ತುಗಳನ್ನು ಖರೀದಿ ಮಾಡಲು ಹೋಗುವ ಗ್ರಾಹಕರನ್ನು ಮೋಸ ಮಾಡಲಾಗುತ್ತಿದೆ.

ನಮಗೆ ಗೊತ್ತರದಂತೆ ವಂಚಿಸಲಾಗುತ್ತಿದೆ. ಆನ್‌ಲೈನ್‌ನಿಂದ ಬರುವ ವಸ್ತುಗಳ ಗುಣ ಮಟ್ಟವೂ ಕೆಲವೊಮ್ಮೆ ಹಾಳಾಗಿರುತ್ತದೆ. ಅದರಂತೆ ಮೆಡಿಕಲ್‌ಗಳಿಂದ ಅಥವಾ ಅನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ತರಿಸುವ ಔಷಧಿಗಳು, ಮಾತ್ರೆಗಳು ನಕಲಿಯೋ, ಅಸಲಿಯೋ ಎಂದು ಹೇಗೆ ತಿಳಿದುಕೊಳ್ಳುವ ಮಾಹಿತಿ ಇಲ್ಲಿದೆ.

ಆರೋಗ್ಯಕ್ಕೆ ಅವಶ್ಯಕವಾದ ಕೆಲವೊಂದು ಔಷಧಿಗಳು ಇತ್ತೀಚೆಗೆ ನಕಲಿಯಾಗಿಯೂ ತಯಾರಿಸಿ ಮಾರ್ಕೆಟ್‌ಗಳಿಗೆ ಬರುತ್ತಿವೆ. ಇವುಗಳ ಮೂಲ ತಿಳಿಯದೇ ಸೇವಿಸುವುದರಿಂದ ಆರೋಗ್ಯದ ಸಮಸ್ಯೆಗಳು ಇನ್ನಷ್ಟು ಗಂಭೀರವಾಗಲಿವೆ. ಹೀಗಾಗಿಯೇ ಔಷಧಿ ಪಾಕೆಟ್‌ ಅಥವಾ ಪ್ಯಾಕ್‌ಗಳ ಮೇಲೆ QR (ಕ್ಯೂಆರ್‌) ಕೋಡ್‌ ಅನ್ನು ಹೊಂದಿರುತ್ತವೆ. ಇದು ಆ ಪ್ಯಾಕ್‌ ಅಸಲಿ ಹೌದೋ, ಅಲ್ಲವೋ ಎಂದು ಖಚಿತ ಪಡಿಸುತ್ತದೆ. ಇದರಿಂದ ಯಾರೇ ಆಗಲಿ ಕ್ಷಣದಲ್ಲೇ ಮೂಲ ಮಾಹಿತಿ ತಿಳಿದುಕೊಳ್ಳಬಹುದು.

ನಿಮ್ಮ ಸ್ಮಾರ್ಟ್‌ ಫೋನ್‌ ಉಪಯೋಗಿಸಿಕೊಂಡು QR ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದರೆ ಸಾಕು ಔಷಧಿ ಗುಣಮಟ್ಟ, ಎಷ್ಟು ನಿಜ ಎನ್ನುವುದು ನಿಮಗೆ ಗೊತ್ತಾಗುತ್ತದೆ. ಇದೊಂದು ಪ್ರಕ್ರಿಯೆಯು ನಿಮ್ಮ ಆರೋಗ್ಯ ಕಾಪಾಡುವುದು ಅಲ್ಲದೇ, ತ್ವರಿತ, ಸುಲಭ ಹಾಗೂ ನಿಖರ ಮಾಹಿತಿ ತಿಳಿಯುತ್ತದೆ. ಯಾರೇ ಅಗಲಿ ಕೇವಲ ಫೋನ್‌ಗಳಿಂದಲೇ ಮನೆಯಲ್ಲಿ, ಮೆಡಿಕಲ್‌ಗಳಲ್ಲಿ ಔಷಧಿಯ ವಿವರಗಳನ್ನು ಪರಿಶೀಲಿಸಬಹುದು.

ಔಷಧಿ ಪ್ಯಾಕ್‌ ಮೇಲೆ ಇರುವ QR ಕೋಡ್‌ ಅನ್ನು ಸ್ಕ್ಯಾನ್‌ ಮಾಡಬೇಕು. ಮೊದಲು ಕಟ್ರೋಲ್‌ ಪ್ಯಾನಲ್‌ಗೆ ಎಂಟ್ರಿಯಾದ ಮೇಲಿಂದ ಕೆಳಕಡೆಗೆ ಸ್ಲೈಡ್‌ ಮಾಡಬೇಕು. ಆಂಡ್ರಾಯ್ಡ್‌ ಕಂಟ್ರೋಲ್‌ ಪ್ಯಾನಲ್‌ನಲ್ಲಿರುತ್ತದೆ. ಐಫೋನ್‌ನಲ್ಲಿ ಇದು ಕಂಟ್ರೋಲ್‌ ಸೆಂಟರ್‌ನಲ್ಲಿರುತ್ತೆ. ಡಿವೈಸ್‌ನಲ್ಲಿ ಕ್ಯೂಆರ್‌ ಸ್ಕ್ಯಾನ್‌ ಪತ್ತೆಯಾದ ಬಳಿಕ ಅದನ್ನು ಟ್ಯಾಪ್‌ ಮಾಡಬೇಕು. ಆಗ ಔಷಧಿಯ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ. ಇದರಿಂದ ಅದರ ಮೂಲ ಮಾಹಿತಿ ನಿಮಗೆ ತಿಳಿಯುತ್ತದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries