HEALTH TIPS

ಅಮೆರಿಕದಿಂದ ನಿರ್ಬಂಧಕ್ಕೊಳಗಾದ ಇರಾನ್ ಟ್ಯಾಂಕರ್‌ ಹಡಗುಗಳನ್ನು ವಶಪಡಿಸಿಕೊಂಡ ಭಾರತ

ನವದೆಹಲಿ: ಅಮೆರಿಕದಿಂದ ನಿರ್ಬಂಧಕ್ಕೊಳಗಾಗಿರುವ ಇರಾನ್‌ನ ಟ್ಯಾಂಕರ್‌ ಹಡಗುಗಳನ್ನು ಭಾರತದ ಕಡಲ ವಲಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. 

ಭಾರತ ಮತ್ತು ಅಮೆರಿಕ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ನಂತರ, ಭಾರತದ ಕಡಲ ವಲಯದಲ್ಲಿ ಅಕ್ರಮ ವ್ಯಾಪಾರವನ್ನು ತಡೆಯಲು ಭಾರಿ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಭಾರತೀಯ ಕಡಲ ರಕ್ಷಣಾ ಪಡೆಯು 55 ಹಡಗು,10 ರಿಂದ 12 ವಿಮಾನಗಳನ್ನು ಕಣ್ಗಾವಲಿಗೆ ಬಳಸುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಇತ್ತೀಚೆಗೆ ಅಮೆರಿಕವು ಭಾರತದಿಂದ ರಫ್ತಾಗುವ ವಸ್ತುಗಳ ಮೇಲಿನ ಸುಂಕವನ್ನು ಶೇ.50ರಿಂದ ಶೇ.18ಕ್ಕೆ ಇಳಿಸಿತ್ತು.

'ಮುಂಬೈನಿಂದ ನೂರು ನಾಟಿಕಲ್ ಮೈಲಿ ದೂರದಲ್ಲಿ ಭಾರತದ ಕಡಲ ವಲಯದೊಳಗೆ ಅನುಮಾನಸ್ಪದ ಘಟನೆಯ ಹಿನ್ನಲೆಯಲ್ಲಿ ಟ್ಯಾಂಕರ್‌ ಹಡಗುಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಫೆ.6ರಂದು ಭಾರತೀಯ ಅಧಿಕಾರಿಗಳು ಪೋಸ್ಟ್ ಮಾಡಿದ್ದರು. ಆದರೆ, ನಂತರ ಅದನ್ನು ಡಿಲೀಟ್ ಮಾಡಲಾಗಿತ್ತು.

ಹೆಚ್ಚಿನ ತನಿಖೆಗಾಗಿ ಆ ಟ್ಯಾಂಕರ್‌ ಹಡಗುಗಳನ್ನು ವಶಪಡಿಸಿಕೊಂಡು, ಮುಂಬೈಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಟ್ಯಾಂಕರ್‌ ಹಡಗುಗಳನ್ನು ಸ್ಟೆಲ್ಲರ್ ರೂಬಿ, ಆಸ್ಫಾಲ್ಟ್ ಸ್ಟಾರ್ ಹಾಗೂ ಅಲ್ ಜಾಫ್ಜಿಯಾ ಎಂದು ಗುರುತಿಸಲಾಗಿದೆ. ಈ ಹಡಗುಗಳು ತಮ್ಮ ಗುರುತನ್ನು ಮರೆಮಾಚಿಕೊಂಡು, ಕಾನೂನುಗಳನ್ನು ಉಲ್ಲಂಘಿಸಿ ಕಡಲನ್ನು ಅಕ್ರಮ ಪ್ರವೇಶ ಮಾಡುವ ಪ್ರಯತ್ನ ಮಾಡುತ್ತಿದ್ದವು ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries