HEALTH TIPS

ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ; 'ಒಪ್ಪಂದ' ಮಾಡಿಕೊಳ್ಳದಿದ್ದರೆ ಕೆಟ್ಟ ಪರಿಣಾಮ: ಇರಾನ್ ಗೆ ಟ್ರಂಪ್ ಬೆದರಿಕೆ

ನ್ಯೂಯಾರ್ಕ್: ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಒಪ್ಪಂದ' ಮಾಡಿಕೊಳ್ಳದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಗೆ ಬೆದರಿಕೆ ಹಾಕಿದ್ದಾರೆ.

ಇರಾನ್ ತನ್ನ ಪರಮಾಣು ಯೋಜನೆಗಳ ವಿಚಾರದಲ್ಲಿ ಪ್ರಗತಿಯಲ್ಲಿರುವಂತೆಯೇ ಈ ಬಗ್ಗೆ ಕೆಂಡಾಮಂಡಲವಾಗಿರುವ ಅಮೆರಿಕ ತನ್ನೊಂದಿಗೆ ಇರಾನ್ 'ಅರ್ಥಪೂರ್ಣ ಒಪ್ಪಂದ' ಮಾಡಿಕೊಳ್ಳದಿದ್ದರೆ 'ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ.

ಇರಾನ್ ನಲ್ಲಿ ಸಂಭವಿಸುವ ಭವಿಷ್ಯದ ಘಟನೆಗಳಿಗೆ ಇರಾನ್ ಸರ್ಕಾರ ನೇರವಾಗಿ ಹೊಣೆಯಾಗಿರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನೊಂದಿಗೆ ಅರ್ಥಪೂರ್ಣ ಒಪ್ಪಂದ ಮಾಡಿಕೊಳ್ಳುವುದು ಸುಲಭವಲ್ಲ ಎಂದು ಸಾಬೀತಾಗಿದೆ. ನಾವು ಅರ್ಥಪೂರ್ಣ ಒಪ್ಪಂದ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ಕೆಟ್ಟ ವಿಷಯಗಳು ಸಂಭವಿಸುತ್ತವೆ ಎಂದು ಟ್ರಂಪ್ "ಶಾಂತಿ ಮಂಡಳಿ"ಯ ಉದ್ಘಾಟನಾ ಸಭೆಯಲ್ಲಿ ಹೇಳಿದ್ದಾರೆ.

ಒಂದು ವೇಳೆ ಇದಕ್ಕೆ ಇರಾನ್ ನಿರಾಕರಿಸಿದರೆ, ಅಮೆರಿಕ "ಒಂದು ಹೆಜ್ಜೆ ಮುಂದೆ ಹೋಗಬೇಕಾಗಬಹುದು. ಮುಂದಿನ 10 ದಿನಗಳಲ್ಲಿ ನೀವು ಅದನ್ನು ಕಂಡುಕೊಳ್ಳುವಿರಿ. ಆಯತೊಲ್ಲಾಗಳು ತಪ್ಪು ಮಾಡಿ ನಮ್ಮ ಮೇಲೆ ದಾಳಿ ಮಾಡಿದರೆ, ಅವರು ಊಹಿಸಲೂ ಸಾಧ್ಯವಾಗದ ಪ್ರತಿಕ್ರಿಯೆಯನ್ನು ಪಡೆಯುತ್ತಾರೆ" ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್‌ಗೆ ದಾಳಿಯ ಬೆದರಿಕೆ ಹಾಕಿದ ಸ್ವಲ್ಪ ಸಮಯದ ನಂತರ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, 'ಇರಾನ್ ವಿರುದ್ಧ ದಾಳಿ ನಡೆಸಲು ಹಲವು ಕಾರಣಗಳು ಮತ್ತು ವಾದಗಳಿವೆ. ಅಧ್ಯಕ್ಷ ಟ್ರಂಪ್ ಜೊತೆ ಒಪ್ಪಂದ ಮಾಡಿಕೊಳ್ಳುವುದು ಇರಾನ್ ತುಂಬಾ ಬುದ್ಧಿವಂತವಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಬಾರಿ ಜಿನೀವಾದಲ್ಲಿ ದೇಶದ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕ ಮತ್ತು ಇರಾನ್ ಒಮಾನಿ ಮಧ್ಯಸ್ಥಿಕೆಯ ಎರಡನೇ ಸುತ್ತಿನ ಮಾತುಕತೆ ನಡೆಸಿದ ಕೆಲವು ದಿನಗಳ ನಂತರ ಈ ಹೇಳಿಕೆಗಳು ಬಂದಿವೆ.

ಮಧ್ಯಪ್ರಾಚ್ಯದಲ್ಲಿ ಭಾರೀ ಯುದ್ಧ ವಿಮಾನಗಳ ನಿಯೋಜನೆ

ಈ ನಡುವೆ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಸೇನೆ ತನ್ನ ಭಾರೀ ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿದೆ. ಇರಾನ್ ಮೇಲೆ ಯಾವುದೇ ಸಮಯದಲ್ಲಿ ದಾಳಿ ಮಾಡಲು ಅಮೆರಿಕ ಸಿದ್ಧವಾಗಿದ್ದು, ಈ ಕುರಿತು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿರುವಂತೆ, ಅಮೆರಿಕದ ಸೇನೆಯು ಮಧ್ಯಪ್ರಾಚ್ಯದಲ್ಲಿ ಬೃಹತ್ ಪ್ರಮಾಣದ ವಾಯುಪಡೆಯನ್ನು ನಿಯೋಜಿಸಿದೆ.

2003ರಲ್ಲಿ ಇರಾಕ್ ಯುದ್ಧ ಪ್ರಾರಂಭವಾದಾಗಿನಿಂದ ಈ ಪ್ರದೇಶದಲ್ಲಿ ಯುದ್ಧವಿಮಾನಗಳ ಅತಿದೊಡ್ಡ ನಿಯೋಜನೆಯಾಗಿದೆ. ಇದರಲ್ಲಿ F-35 ಮತ್ತು F-22 ಜೆಟ್ ಫೈಟರ್ ಗಳು ಸೇರಿವೆ. ದಾಳಿ ಮತ್ತು ಎಲೆಕ್ಟ್ರಾನಿಕ್ ಯುದ್ಧ ವಿಮಾನಗಳಿಂದ ಸಜ್ಜುಗೊಂಡ ಎರಡನೇ ವಿಮಾನವಾಹಕ ನೌಕೆಯೂ ಈ ಪ್ರದೇಶಕ್ಕೆ ತೆರಳುತ್ತಿದೆ. ದೊಡ್ಡ ಮಟ್ಟದ ಕಾರ್ಯಾಚರಣೆಗಳನ್ನು ನಡೆಸಲಿರುವ ಪ್ರಮುಖ ಕಮಾಂಡ್-ಅಂಡ್-ಕಂಟ್ರೋಲ್ ವಿಮಾನಗಳೂ ಆಗಮಿಸುತ್ತಿವೆ. ಆದರೆ ಇರಾನ್ ಮೇಲೆ ದಾಳಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂತಿಮ ಒಪ್ಪಿಗೆ ಮಾತ್ರ ಬಾಕಿ ಇದೆ ಎಂದು ಹೇಳಿದೆ.

ಫ್ಲೈಟ್-ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಡಜನ್ಗಟ್ಟಲೆ ಅಮೆರಿಕ ವಾಯುಪಡೆಯ ಫೈಟರ್ ಜೆಟ್ಗಳು ಮತ್ತು ಬೆಂಬಲ ವಿಮಾನಗಳು ಜೋರ್ಡಾನ್ ನ ಮುವಾಫಾಕ್ ಸಾಲ್ಟಿ ವಾಯುನೆಲೆ ಹಾಗೂ ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಗೆ ತೆರಳಿವೆ. ಇನ್ನಷ್ಟು ವಿಮಾನಗಳು ಆಗಮಿಸುತ್ತಿವೆ. ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಇವುಗಳಲ್ಲಿ F-35, F-15, F-16, F-22 ರಾಪ್ಟರ್ ಸ್ಟೆಲ್ತ್ ಫೈಟರ್ ಜೆಟ್ಗಳು, E-3 ಏರ್ಬೋರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಸಿಸ್ಟಮ್ ಹಾಗೂ E-11 ಬ್ಯಾಟಲ್ಫೀಲ್ಡ್ ಏರ್ಬೋರ್ನ್ ಕಮ್ಯುನಿಕೇಶನ್ ನೋಡ್ ವಿಮಾನಗಳು ಸೇರಿವೆ.

ಇದಲ್ಲದೆ ಮಧ್ಯಪ್ರಾಚ್ಯದ ಸಮೀಪ ಹಲವಾರು KC-135 ವಿಮಾನಗಳು, E-3 ಸೆಂಟ್ರಿ ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನಗಳು ಹಾಗೂ ಸರಕು ವಿಮಾನಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಅಂತೆಯೇ ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ ಸಂಭಾವ್ಯ ಕಾರ್ಯಾಚರಣೆಗಳಿಗೆ ಬೆಂಬಲವಾಗಿ 13 ಹಡಗುಗಳನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಇದರಲ್ಲಿ ವಿಮಾನವಾಹಕ ನೌಕೆ USS ಅಬ್ರಹಾಂ ಲಿಂಕನ್ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳ ವಿರುದ್ಧ ರಕ್ಷಣಾ ಸಾಮರ್ಥ್ಯವಿರುವ ಒಂಬತ್ತು ವಿಧ್ವಂಸಕ ಹಡಗುಗಳು ಸೇರಿವೆ ಎನ್ನಲಾಗಿದೆ.

23 ವರ್ಷಗಳಲ್ಲಿ ಇದೇ ಮೊದಲು

ಇನ್ನು ಈ ಹಿಂದೆ 2003ರಲ್ಲಿ ಅಮೆರಿಕ ಸೇನೆ ಮಧ್ಯಪ್ರಾಚ್ಯದಲ್ಲಿ ತನ್ನ ಮಿಲಿಟರಿ ಬಲವರ್ಧನೆ ಮಾಡಿಕೊಂಡಿತ್ತು. ಆ ಬಳಿಕ ಬರೊಬ್ಬರಿ 23 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಇರಾನ್ ಬಳಿ ತನ್ನ ದೊಡ್ಡ ಸೇನೆಯನ್ನು ನಿಯೋಜಿಸುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries