HEALTH TIPS

ಇರಾನ್ ಮೇಲೆ ದಾಳಿಗೆ ತನ್ನ ಸೇನಾನೆಲೆ ಬಳಸಲು ಅಮೆರಿಕಕ್ಕೆ ಅನುಮತಿ ನಿರಾಕರಿಸಿದ ಬ್ರಿಟನ್

ಲಂಡನ್: ಇರಾನ್ ಮೇಲಿನ ಯಾವುದೇ ಸಂಭಾವ್ಯ ದಾಳಿಗೆ ತನ್ನ ಪ್ರಮುಖ ಮಿಲಿಟರಿ ನೆಲೆಯನ್ನು ಬಳಸಲು ಅಮೆರಿಕಕ್ಕೆ ಅನುಮತಿ ನೀಡುವುದನ್ನು ಬ್ರಿಟನ್ ಸರಕಾರ ತಡೆಹಿಡಿದಿರುವುದಾಗಿ ವರದಿಯಾಗಿದೆ.

ಇರಾನ್‍ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆ ನಡೆಯುತ್ತಿರುವಂತೆಯೇ ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಬಲವನ್ನು ಹೆಚ್ಚಿಸುವ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್ ಇರಾನ್ ಮೇಲೆ ಒತ್ತಡ ತೀವ್ರಗೊಳಿಸುತ್ತಿದ್ದಾರೆ.

ಇರಾನ್ ಮೇಲಿನ ಅಮೆರಿಕದ ಯಾವುದೇ ದಾಳಿಯಲ್ಲಿ ಹಿಂದೂ ಮಹಾಸಾಗರದಲ್ಲಿರುವ ಆಯಕಟ್ಟಿನ ಸೇನಾನೆಲೆ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ಟ್ರಂಪ್ ಬುಧವಾರ ಹೇಳಿದ್ದರು. ಆದರೆ ಇಂತಹ ದಾಳಿಗೆ ತನ್ನ ಮಿಲಿಟರಿ ನೆಲೆಯನ್ನು ಬಳಸಲು ಬ್ರಿಟನ್ ಅನುಮತಿ ನೀಡಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ `ಇಂಡಿಯಾ ಟುಡೆ' ವರದಿ ಮಾಡಿದೆ.

ನೈಋತ್ಯ ಇಂಗ್ಲೆಂಡಿನ ಸ್ವಿಂಡನ್ ನಗರದ ಬಳಿಯ ಫೇರ್‍ಫೋರ್ಡ್ ವಾಯುನೆಲೆಯ ಮೂಲಕ ಅಮೆರಿಕದ ದೀರ್ಘಶ್ರೇಣಿಯ ಬಾಂಬರ್ ವಿಮಾನಗಳ ಕಾರ್ಯಾಚರಣೆಗೆ ಬ್ರಿಟನ್ ಸರಕಾರ ಅನುಮತಿ ನಿರಾಕರಿಸಿದೆ. ಅನುಮತಿ ನೀಡಿದರೆ ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸ್ಪಷ್ಟಪಡಿಸಿರುವುದಾಗಿ ವರದಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries