ಜಮ್ಮು: ಇಲ್ಲಿನ ಕಿಶ್ತವಾಡ ಜಿಲ್ಲೆಯ ಹಿಮಾವೃತ ಕಣಿವೆಯ ಛತರೂ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ಮಧ್ಯೆ ಬುಧವಾರ ಸಂಜೆ ಗುಂಡಿನ ಚಕಮಕಿ ನಡೆದಿದೆ.
ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯವರಿಗಾಗಿ ಭದ್ರತಾ ಪಡೆಗಳು ಕಳೆದ 18 ದಿನಗಳಿಂದ ಹುಡುಕಾಟ ನಡೆಸುತ್ತಿವೆ.
ಈ ಅವಧಿಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ಮಧ್ಯೆ ಒಟ್ಟು ಐದು ಸಂರ್ಘಷಗಳು ನಡೆದಿವೆ. ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ.

