HEALTH TIPS

ಕೃಷಿ ಉತ್ಪನ್ನಗಳ ಮೇಲಿನ ಸುಂಕ ಕೈಬಿಡಲಿರುವ ಭಾರತ: ಗ್ರೀರ್

ನ್ಯೂಯಾರ್ಕ್: 'ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಭಾಗವಾಗಿ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹಲವು ಸರಕುಗಳ ಮೇಲಿನ ಸುಂಕವನ್ನು ಭಾರತ ಕಡಿಮೆ ಮಾಡಲಿದೆ. ಕೆಲ ಕೈಗಾರಿಕೆ ಸರಕುಗಳು, ಹಣ್ಣುಗಳು/ ತರಕಾರಿಗಳು ಸೇರಿ ಕೃಷಿ ಉತ್ಪನ್ನಗಳ ಮೇಲಿನ ಸುಂಕವನ್ನು ಅದು ತೆಗೆದು ಹಾಕಲಿದೆ' ಎಂದು ಅಮೆರಿಕ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್‌) ಜೇಮ್‌ಸನ್ ಗ್ರೀರ್‌ ಹೇಳಿದ್ದಾರೆ.

'ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಫಂದ ಮಹತ್ವದ ಬೆಳವಣಿಗೆ' ಎಂದು ಬಣ್ಣಿಸಿದ ಅವರು,'ಕೆಲ ಕ್ಷೇತ್ರಗಳನ್ನು ರಕ್ಷಿಸುವುದಕ್ಕೆ ಭಾರತ ಒತ್ತು ನೀಡಿದ್ದು, ಅವುಗಳ ಮೇಲೆ ಅದು ಹೊಂದಿರುವ ನಿಯಂತ್ರಣ ಅಬಾಧಿತವಾಗಿರಲಿದೆ' ಎಂದು ಹೇಳಿದ್ದಾರೆ.

ಸಿಎನ್‌ಬಿಸಿ ಸ್ಕ್ವಾಕ್‌ಬಾಕ್ಸ್‌ ಜೊತೆ ಮಾತನಾಡಿರುವ ಗ್ರೀರ್‌,'ಭಾರತದೊಂದಿಗಿನ ವ್ಯಾಪಾರ ಕೊರತೆ ಅಧಿಕವಾಗಿದೆ. ಇದನ್ನು ಸರಿದೂಗಿಸುವ ಭಾಗವಾಗಿ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ18ರಷ್ಟು ತೆರಿಗೆಯನ್ನು ಅಮೆರಿಕ ವಿಧಿಸಲಿದೆ' ಎಂದು ಹೇಳಿದ್ದಾರೆ.

'ಇದಕ್ಕೆ ಪ್ರತಿಯಾಗಿ, ಹಲವು ಕೃಷಿ ಉತ್ಪನ್ನಗಳು, ರಾಸಾಯನಿಕಗಳು, ವೈದ್ಯಕೀಯ ಉಪಕರಣಗಳ ಮೇಲಿನ ಸುಂಕ ಕಡಿಮೆ ಮಾಡುವುದಕ್ಕೆ ಭಾರತ ಒಪ್ಪಿದೆ. ಈ ಎಲ್ಲ ದೃಷ್ಟಿಯಿಂದ ಉಭಯ ದೇಶಗಳಿಗೆ ಅದ್ಭುತ ಅವಕಾಶ ಬಂದೊದಗಿದಂತಾಗಿದೆ' ಎಂದು ವಿವರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries