HEALTH TIPS

ಪುಟಿನ್‌-ಜಿನ್‌ಪಿಂಗ್‌ ಮಾತುಕತೆ: ಸಹಕಾರವನ್ನು ವೃದ್ಧಿಸುವ ಬಗ್ಗೆ ಚರ್ಚೆ

ಬೀಜಿಂಗ್: ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಜೊತೆ ವಿಡಿಯೊ ಕರೆ ಮೂಲಕ ಬುಧವಾರ ಮಾತುಕತೆ ನಡೆಸಿದ ರಷ್ಯಾದ ಆಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಚೀನಾದೊಂದಿಗೆ ತಮ್ಮ ದೇಶದ ಆರ್ಥಿಕ ಸಹಕಾರ ವೃದ್ಧಿಯಾಗುತ್ತಿರುವುದನ್ನು ಶ್ಲಾಘಿಸಿದರು. 

ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧದ ವಿಚಾರವಾಗಿ ಭಿನ್ನಾಭಿಪ್ರಾಯಗಳಿದ್ದರೂ ಚೀನಾದೊಂದಿಗಿನ ಸಹಕಾರವನ್ನು ವೃದ್ಧಿಸಲು ಬಯಸುವ ಪಾಶ್ಚಿಮಾತ್ಯ ನಾಯಕರೊಂದಿಗೆ ಜಿನ್‌ಪಿಂಗ್‌ ನಡೆಸುತ್ತಿರುವ ಸರಣಿ ಸಭೆಯ ಭಾಗವಾಗಿ ಈ ಮಾತುಕತೆ ನಡೆಯಿತು.

ಪಾಶ್ಚಿಮಾತ್ಯ ಆರ್ಥಿಕ ನಿಬಂಧನೆಗಳಿಂದ ಸ್ವಲ್ಪ ಮಟ್ಟಿನ ವಿನಾಯಿತಿ ನೀಡುವ ಜೊತೆಗೆ ರಷ್ಯಾದೊಂದಿಗಿನ ವ್ಯಾಪಾರ ವಹಿವಾಟನ್ನು ಚೀನಾ ಮುಂದುವರಿಸಲಿದೆ.

'ಉಭಯ ದೇಶಗಳ ಸಾರ್ವಭೌಮತೆ ಮತ್ತು ಭದ್ರತೆ ವಿಚಾರದಲ್ಲಿ ಪೂರ್ಣ ಸಹಕಾರ ನೀಡುತ್ತೇವೆ ಎನ್ನುವುದನ್ನು ಮತ್ತೊಮ್ಮೆ ಖಚಿತಪಡಿಸುತ್ತೇವೆ' ಎಂದು ಪುಟಿನ್ ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಇತ್ತೀಚಿನ ಕೆಲವು ನಿರ್ಧಾರಗಳ ಬಗ್ಗೆ ಅಸಮಾಧಾನ ಹೊಂದಿರುವ ಅವರ ಕೆಲ ಮಿತ್ರರಾಷ್ಟ್ರಗಳು ನಿಧಾನವಾಗಿ ಚೀನಾದತ್ತ ಒಲವು ತೋರುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries