HEALTH TIPS

ಭಾರತದ ಜತೆಗಿನ ಒಪ್ಪಂದ‌ವು ರಷ್ಯಾದ ಆಕ್ರಮಣ ಎದುರಿಸಲು ನೆರವಾಗುತ್ತದೆ: ಅಮೆರಿಕ

ನ್ಯೂಯಾರ್ಕ್‌: ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಿಂದ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಬಹುದು. ಈ ಒಪ್ಪಂದವು ರಷ್ಯಾದ ಆಕ್ರಮಣವನ್ನು ಎದುರಿಸಲು ಸಹ ನೆರವಾಗುತ್ತದೆ ಎಂದು ಅಮೆರಿಕದ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

'ವಿಶ್ವದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವು ಅಮೆರಿಕದೊಂದಿಗಿನ ವ್ಯಾಪಾರದ ತೊಡಕುಗಳನ್ನು ನಿವಾರಿಸಲು ಒಪ್ಪಿಕೊಂಡಿರುವುದು ಸಂತೋಷದ ವಿಷಯ' ಎಂದು ಸೆನೆಟ್‌ ವಿದೇಶಾಂಗ ಸಂಬಂಧಗಳ ಸಮಿತಿ ಅಧ್ಯಕ್ಷ ಸೆನೆಟರ್‌ ಜಿಮ್‌ ರಿಶ್‌ 'ಎಕ್ಸ್‌' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

'ಭಾರತವು ಅಮೆರಿಕದ ನಿಕಟ ಪಾಲುದಾರ. ಇಂಡೋ-ಪೆಸಿಫಿಕ್‌ ವಲಯದಲ್ಲಿ ಚೀನಾದ ದುರುದ್ದೇಶಪೂರಿತ ಪ್ರಭಾವವನ್ನು ಎದುರಿಸಲು ಭಾರತ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಹೊಸ ಒಪ್ಪಂದದಡಿ ಅಮೆರಿಕದ ವಸ್ತುಗಳನ್ನು ಖರೀದಿಸುವುದಾಗಿ ಭಾರತವು ಹೇಳಿದೆ. ಇದು ರಷ್ಯಾದ ಆಕ್ರಮಣವನ್ನು ಎದುರಿಸಲು ಮತ್ತು ಆ ದೇಶದಿಂದ ತೈಲ ಖರೀದಿಯನ್ನು ಕಡಿತಗೊಳಿಸುವ ಮೂಲಕ ಉಕ್ರೇನ್‌-ರಷ್ಯಾ ಯುದ್ಧವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ' ಎಂದು ತಿಳಿಸಿದ್ದಾರೆ.

'ಕೃಷಿ ಉತ್ಪನ್ನಗಳನ್ನು ಭಾರತದ ಬೃಹತ್‌ ಮಾರುಕಟ್ಟೆಗೆ ರಫ್ತು ಮಾಡಬಹುದು. ಇದರಿಂದ ಉತ್ಪನ್ನಗಳ ಬೆಲೆ ಹೆಚ್ಚಲಿದೆ. ಗ್ರಾಮೀಣ ಅಮೆರಿಕಕ್ಕೆ ಹಣದ ಹರಿವನ್ನು ಹೆಚ್ಚಿಸುತ್ತದೆ' ಎಂದು ಅಮೆರಿಕದ ಕೃಷಿ ಕಾರ್ಯದರ್ಶಿ ಬ್ರೂಕ್‌ ರೋಲಿನ್ಸ್‌ 'ಎಕ್ಸ್‌' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

'ಸಮಗ್ರ ಒಪ್ಪಂದದತ್ತ ಇಟ್ಟಿರುವ ಮೊದಲ ಹೆಜ್ಜೆ'

'ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ಸಮಗ್ರ ದ್ವಿಪಕ್ಷೀಯ ಒಪ್ಪಂದದತ್ತ ಇಟ್ಟಿರುವ ಮೊದಲ ಹೆಜ್ಜೆ' ಎಂದು ಪ್ರಮುಖ ವಾಣಿಜ್ಯ ಸಂಸ್ಥೆಗಳು ಮತ್ತು ಚಿಂತಕರ ಚಾವಡಿ ಅಭಿಪ್ರಾಯಪಟ್ಟಿವೆ.

'ಈ ಒಪ್ಪಂದವು ಖಾಸಗಿ ವಲಯದ ಸಹಭಾಗಿತ್ವವನ್ನು ಹೆಚ್ಚಿಸಲು ಪೂರಕವಾದ ಮಾರ್ಗವನ್ನು ಸುಗಮಗೊಳಿಸುತ್ತದೆ' ಎಂದು ಹೇಳಿವೆ.

'ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನಗಳು ಹಾಗೂ ರಾಯಭಾರಿಗಳಾದ ವಿನಯ್‌ ಕ್ವಾಟ್ರಾ ಸೆರ್ಜಿಯೊ ಗೊರ್‌ ಅವರ ಶ್ರಮ ಶ್ಲಾಘನೀಯ' ಎಂದು ಅಮೆರಿಕದ ಛೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷೆ ಸುಜೇನ್‌ ಕ್ಲಾರ್ಕ್‌ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries