ಕಾಸರಗೋಡು: ದೇಶದ ಉದ್ದಗಲ ಸಂಚರಿಸಿದಾಗ ಪ್ರತಿಯೊಂದೆಡೆಯೂ ವೈವಿಧ್ಯಮಯ ಭಾಷೆ, ಸಂಸ್ಕøತಿ, ಜನಜೀವನ ಗಮನ ಸೆಳೆಯುತ್ತದೆ. ಇಂತಹ ವಿವಿಧತೆಯ ಮಧ್ಯೆ ಒಂದನ್ನೊಂದು ಕೂಡಿ ಕಲೆತಾಗ ಉತ್ತಮ ಸಮಾಜ ರೂಪುಗೊಳ್ಳುತ್ತದೆ. ಪರಸ್ಪರ ಸಾಂಸ್ಕøತಿಕ ವಿನಿಮಯ ಒಗ್ಗಟ್ಟಿಗೆ ಬಲ ನೀಡುತ್ತದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕಳಿ ಟ್ರಸ್ಟ್ ಅರವತ್ತ್ ಬೇಕಲ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಕರ್ನಾಟಕ ಜಾನಪದ ಪರಿಷತ್ತು ಯುಎಇ ಮತ್ತು ಒಮಾನ್ ಘಟಕದ ಸಹಕಾರದಲ್ಲಿ ಭಾನುವಾರ ಬೆಳಗ್ಗೆ 9ರಿಂದ ರಾತ್ರಿ 10ರ ತನಕ ಬೇಕಲ ಅರವತ್ತ್ ಆಂಫಿಥಿಯೇಟರ್ಸ್ ನಲ್ಲಿ ಆಯೋಜಿಸಲಾಗಿದ್ದ "ಸಮನ್ವಯ" ಗಡಿನಾಡ ಜಾನಪದ ಉತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊಸ ತಲೆಮಾರು ತಂತ್ರಜ್ಞಾನದ ಹಿಂದೆ ಓಡುತ್ತಿರುವ ಮಧ್ಯೆ ಸ್ಥಳೀಯ ಸಾಂಸ್ಕøತಿಕ, ಜಾನಪದ ವೈವಿಧ್ಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳವಳಗಳು ಮೂಡುತ್ತಿವೆ. ಜಗತ್ತು ಕಿರಿದಾದಷ್ಟೂ ಮನಸ್ಸುಗಳು ದೂರವಾಗುವ ಭೀತಿಯೂ ಇದೆ. ಈ ನಿಟ್ಟಿನಲ್ಲಿ ಭಾಷೆ, ಸಂಸ್ಕøತಿಯನ್ನು ಬೆಸೆಗೆಯಾಗಿಸಿ ಕುಗ್ಗುವ ಮನಸ್ಸುಗಳನ್ನು ಹಿಗ್ಗಿಸುವ ಕೆಲಸಗಳಾಗಬೇಕು ಎಂದವರು ತಿಳಿಸಿದರು.
ಗಡಿನಾಡು ಕಾಸರಗೋಡಿನ ಕನ್ನಡಿಗರು ವ್ಯಾವಹಾರಿಕವಾಗಿ ಕೇರಳದಲ್ಲಿದ್ದರೂ, ಮಾನಸಿಕವಾಗಿ ಕನ್ನಡದೊಂದಿಗೆ ಹಾಸುಹೊಕ್ಕಾಗಿದೆ. ಇಲ್ಲಿಯ ಕನ್ನಡಿಗರು ಮಲೆಯಾಳವನ್ನು ಒಪ್ಪಿ ಭಾವನೆಗೆ ಧಕ್ಕೆಯಾಗದಂತೆ ನಡೆಯುತ್ತಿದ್ದಾರೆ. ಮಲೆಯಾಳಿಗರೂ ಆ ಭಾವನೆಯನ್ನು ಅರ್ಥೈಸಿ ಬೆಂಬಲವಾಗಿ ಸಮನ್ವಯತೆಯಿಂದ ಬಾಳನ್ನು ಕಲ್ಪಿಸಲು ಮರೆಯಬಾರದು ಎಂದವರು ಈ ಸಂದರ್ಭ ವಿಶೇಷವಾಗಿ ಸೂಚಿಸಿದರು.
ಸಮಾರಂಭವನ್ನು ಭದ್ರದೀಪ ಬೆಳಗಿಸಿ ಉದ್ಘಾಟಿಸಿದ ಉದುಮ ಶಾಸಕ ವಕೀಲ ಸಿ.ಎಚ್.ಕುಂಞಂಬು ಮಾತನಾಡಿ, ಬಹುಭಾಷಾ ಸಂಗಮ ಭೂಮಿಯಾದ ಕಾಸರಗೋಡಿನ ವೈವಿಧ್ಯಮಯ ಸಂಸ್ಕøತಿಯನ್ನು ಉಳಿಸುವಲ್ಲಿ ಇಂತಹ ಬಹುನೆಲೆಯ ಕಾರ್ಯಕ್ರಮಗಳು ಪೂರಕವಾದುದು. ಕಲಹಗಳಿಲ್ಲದೆ ಪರಸ್ಪರ ಜೊತೆಯಾಗಿ ಸಾಗಿದಾಗ ಸಮಾಜ ಮುನ್ನಡೆ ಸಾಧಿಸುತ್ತದೆ. ಕೇರಳ ಸರ್ಕಾರ ಭಾಷಾ ಅಲ್ಪಸಂಖ್ಯಾತ ಕನ್ನಡಿಗರನ್ನು ಅವಗಣಿಸುವುದಿಲ್ಲ ಎಂದು ತಿಳಿಸಿದರು. ಕನ್ನಡದ ಜೊತೆಗೆ ಇಲ್ಲಿಯ ತುಳು ಸಹಿತ ಇತರ ಭಾಷೆಗಳೆಲ್ಲವನ್ನೂ ಸೇರಿಸಿ ಸಾಂಸ್ಕøತಿಕ ಉತ್ಸವವೊಂದು ಮುಂದಿನ ದಿನಗಳಲ್ಲಿ ಮೂಡಿಬರಲಿ ಎಂದು ಹಾರೈಸಿದರು.
ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಅಧ್ಯಕ್ಷ ಪೆÇ್ರ.ಹಿ.ಚಿ. ಬೋರಲಿಂಗಯ್ಯ, ಗ.ಸಾ.ಸಾ.ಅ.ಪ್ರಾ. ಕಾಸರಗೋಡು ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಕನಿಷ್ಠ ವೇತನ ಆಯೋಗದ ಅಧ್ಯಕ್ಷ ಟಿ.ಎಂ.ಶಹೀದ್, ಕೆ.ಆರ್.ಎಸ್.ಎಂ.ಕೇರಳ ಅಧ್ಯಕ್ಷ ರಾಘವ ಚೇರಾಲ್, ಕ.ಜಾ.ಪ ಕೇರಳ ಘಟಕ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಎಸ್. ನಾಸಿ, ಮಂಗಳೂರು ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಯುಎಇ ಘಟಕದ ಅಧ್ಯಕ್ಷ ಸದನ್ ದಾಸ್ ಶಿರೂರು, ಒಮಾನ್ ಘಟಕದ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಕಟಪಾಡಿ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದರು.
ಈ ಸಂದರ್ಭ ಶಿವಾನಂದ ಕೋಟ್ಯಾನ್ ಕಟಪಾಡಿ ಅವರ "ನಂಟು" ಕನ್ನಡ ಕೃತಿ, ಮಲೆಯಾಳ ಕೃತಿ ಡಾ.ಜಯರಾಜನ್ ಕಾನಾಡ್ ಅವರು ಬರೆದ ಬರವುದ ಸಾದಿ, ಮುನೀರ ಎ. ಬರೆದ ಹೃದಯ ರಾಗ ಕವನ ಸಂಕಲನ ಬಿಡುಗಡೆ ನಡೆಯಿತು.
ಬೆಳಗ್ಗೆ 9ಕ್ಕೆ ಮುದಿಯಕ್ಕಲ್‍ನಿಂದ ಟ್ರಸ್ಟ್ ಕಚೇರಿ ವರೆಗೆ ಸಾಂಸ್ಕೃತಿಕ ಮೆರವಣಿಗೆ, 9.30ಕ್ಕೆ ಚೆಂಡೆಮೇಳ ನಡೆಯಿತು. ಎನ್.ಕೆ.ಪಿ.ಎಸ್.ಕೆ.ಟ್ರಸ್ಟ್ ಅಧ್ಯಕ್ಷ ಪ್ರೊ.ಎ.ಎಂ.ಶ್ರೀಧರನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಪಿ.ಭಾಸ್ಕರನ್ ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಮನ್ವಯ: ಕಥಕಳಿ-ಯಕ್ಷಗಾನ ಪ್ರದರ್ಶನ ನಡೆಯಿತು. ಕೋಟಕಲ್ ಉಣ್ಣಿಕೃಷ್ಣನ್(ಕಥಕಳಿ) ಮತ್ತು ಜಯರಾಮ ಪಟಾಳಿ ಪಡುಮಲೆ(ಯಕ್ಷಗಾನ) ಪ್ರಸ್ತುತಪಡಿಸಿದರು.
ಕೇರಳ ಮತ್ತು ಕರ್ನಾಟಕದ ನಡುವಿನ ಸಾಂಸ್ಕೃತಿಕ ಸಾಮರಸ್ಯವನ್ನು ಸಂಕೇತಿಸುವ ಈ ಉತ್ಸವದಲ್ಲಿ ಚೆಂಡೆ ಮೇಳದೊಂದಿಗೆ ವರ್ಣರಂಜಿತ ಮೆರವಣಿಗೆ ಪೂರಕ್ಕಳಿ, ಕೋಲ್ಕಳಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವೀರಗಾಸೆ, ನಾಸಿಕ್ ಡೋಳು, ಜಾನಪದ ನೃತ್ಯ, ಸಮೂಹ ನೃತ್ಯ, ಇತರ ಸಾಂಪ್ರದಾಯಿಕ ಮತ್ತು ಜಾನಪದ ಕಲಾ ಪ್ರಕಾರಗಳು, ಶ್ರೀಮಂತ ಜಾನಪದ ಮತ್ತು ಶಾಸ್ತ್ರೀಯ ಪ್ರದರ್ಶನ, ಕೈಕೊಟ್ಟಿಕಳಿ, ದಫ್ ಮುಟ್ಟ್, ಮಂಗಳಂಕಳಿ ಅಲಾಮಿಕಳಿ, ಇರುಳನೃತ್ಯಂ, ಯಕ್ಷಗಾನ, ಕಥಕ್ಕಳಿ, ಪೂಜಾಕುಣಿತ ರಾತ್ರಿ 7ರಿಂದ ಗಧಾಯುದ್ಧ ಯಕ್ಷಗಾನ, 8ರಿಂದ "ಲವಣಾಸುರವಧಮ್" ಕಥಕ್ಕಳಿ ಪ್ರದರ್ಶನ ನಡೆಯಿತು. ಈ ಸಂದರ್ಭ ಕಥಕ್ಕಳಿ, ಯಕ್ಷಗಾನ, ಮತ್ತು ಜಾನಪದ ಕಲೆ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಿತು. .
ಬೋರ್ಗ್ ರೋಲ್ಸ್ ವಾರ್ನರ್ ಸಂಸ್ಥಾಪಕ ನಜೀರ್ ವೆಲಿಯಿಲ್ ಮತ್ತು ಕಲಾಪೆÇೀಷಕ ಡಾ.ಮಣಿಕಂಠನ್ ಮೇಲೋತ್ ಅವರಿಗೆ ಭಾವ ಭಾರತಿ ಪುರಸ್ಕಾರ, ಕಥಕ್ಕಳಿ ಕಲಾವಿದ ಕೋಟಕ್ಕಲ್ ದೇವದಾಸನ್ ಅವರಿಗೆ ನಾಟ್ಯಾಚಾರ್ಯ ಪುರಸ್ಕಾರ, ಡಾ.ವಾದ್ಯಪ್ರವೀಣ್ ಚೆರುತಾಯಂ ಕುಞÂರಾಮನ್ ಮಾರಾರ್ ಅವರಿಗೆ ಪ್ರತಿಭಾ ಪುರಸ್ಕಾರ(ಚೆಂಡೆ), ಕೋಟಕ್ಕಲ್ ರಮೇಶನ್ ಮಾರಾರ್ ಗೆ ಪ್ರತಿಭಾ ಪುರಸ್ಕಾರ (ಚೆಂಡೆ), ಕೋಡೋತ್ ತರವಾಡಿಗೆ ದೇಸಿ ಪುರಸ್ಕಾರ, ಕಲಾಪೆÇೀಷಕ ಪ್ರಕಾಶ್ ಕುಂಪಲ ಅವರಿಗೆ ಸಮಾಜರತ್ನ ಪ್ರಶಸ್ತಿ ಜಾನಪದ ಕಲಾಪೆÇೀಷಕ ಜೋಸೆಫ್ ಮಥಾಯಸ್ ದುಬೈ ಮತ್ತು ಅಂಕಣಕಾರ, ಜಾನಪದ ಕಲಾ ಪೆÇೀಷಕರು ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‍ಪೇಟೆ ಅವರಿಗೆ ಜಾನಪದ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

.jpg)
.jpg)
.jpg)
.jpg)
