"ಕಳೆದ ಕೆಲವು ವರ್ಷಗಳಿಂದ ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಮ್ಮ ಮೇಲೆ ಆರೋಪ ಮಾಡುತ್ತಿದೆ.
ಇಂದು ನ್ಯಾಯಾಲಯವು ನಮ್ಮ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ. ಸತ್ಯ ಗೆಲ್ಲುತ್ತದೆ ಎಂದು ನಾವು ಯಾವಾಗಲೂ ಹೇಳುತ್ತಿದ್ದೆವು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ ವಿರುದ್ಧ ಪಿತೂರಿ ನಡೆಸಿ ಪಕ್ಷದ ಐವರು ದೊಡ್ಡ ನಾಯಕರನ್ನು ಬಂಧಿಸಿದರು. ಹಾಲಿ ಮುಖ್ಯಮಂತ್ರಿಯನ್ನು ಕೂಡ ಬಂಧಿಸಲಾಯಿತು. ನಮ್ಮ ಮೇಲೆ ಆರೋಪ ಹೊರಿಸಲಾಯಿತು ಮತ್ತು ಪ್ರತಿ ಚಾನೆಲ್‌ನಲ್ಲಿಯೂ ಭ್ರಷ್ಟ ಎಂದು ಕರೆಯಲಾಯಿತು. ಇಂದು ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಆಪ್ ಪ್ರಾಮಾಣಿಕರು ಎಂದು ನ್ಯಾಯಾಲಯ ಹೇಳಿದೆ" ಎಂದು ಕಣ್ಣೀರಿಡುತ್ತಾ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಜಿತೇಂದ್ರ ಸಿಂಗ್ ಅವರು ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರ 23 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆ ಉಲ್ಲೇಖಿಸಿ ಖುಲಾಸೆಗೊಳಿಸಿದ್ದಾರೆ.

