HEALTH TIPS

ಕೇವಲ ಪ್ರಶ್ನಿಸುವುದಕ್ಕಾಗಿ ವ್ಯಕ್ತಿಯನ್ನು ಬಂಧಿಸುವಂತಿಲ್ಲ: ಸುಪ್ರೀಂಕೋರ್ಟ್

ನವದೆಹಲಿ: ಕೇವಲ ಪ್ರಶ್ನಿಸುವುದಕ್ಕಾಗಿ ವ್ಯಕ್ತಿಯನ್ನು ಬಂಧಿಸುವಂತಿಲ್ಲವೆಂದು ಸುಪ್ರೀಂಕೋರ್ಟ್ ಶುಕ್ರವಾರ ಪ್ರತಿಪಾದಿಸಿದೆ. ಪ್ರಕರಣದ ತನಿಖೆಗೆ ಅತ್ಯವಶ್ಯಕವಾಗಿದ್ದರೆ ಮಾತ್ರವೇ ಆತನನ್ನು ಬಂಧಿಸಬಹುದೆಂದು ಅದು ಹೇಳಿದೆ.

ಕನಿಷ್ಠ 7 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದಾದಂತಹ ದಂಡನೀಯ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳದೆ ತನಿಖೆ ನಡೆಸಲು ಸಾಧ್ಯವಿಲ್ಲವೆಂದು ಪೊಲೀಸ್ ಅಧಿಕಾರಿಯು ಖಚಿತಪಡಿಸಿಕೊಂಡ ಬಳಿಕವಷ್ಟೇ ಆತ ವ್ಯಕ್ತಿಯನ್ನು ಬಂಧಿಸಬಹುದಾಗಿದೆಯೇ ಹೊರತು ಕೇವಲ ಪ್ರಶ್ನಿಸುವುದಕ್ಕಾಗಿ ಆತನನ್ನು ಬಂಧಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಹಾಗೂ ಎನ್.ಕೆ.ಸಿಂಗ್‌ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.

ಇದಕ್ಕೆ ವ್ಯತಿರಿಕ್ತವಾಗಿ ಪೊಲೀಸ್ ಅಧಿಕಾರಿಯು ವರ್ತಿಸಿದಲ್ಲಿ, ಅದು ಭಾರತೀಯ ದಂಡಸಂಹಿತೆಯ 35(1)(ಬಿ) ಹಾಗೂ ಸೆಕ್ಷನ್‌ಗಳಾದ 35(3) ರಿಂದ 35(6) ಸೆಕ್ಷನ್‌ಗಳ ಉದ್ದೇಶ ಹಾಗೂ ಶಾಸನಾತ್ಮಕ ಆಶಯವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅದು ಹೇಳಿದೆ.

ಅಲಹಾಬಾದ್ ಹೈಕೋರ್ಟ್‌ನ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ಸಂದರ್ಭ ಸುಪ್ರೀಂಕೋರ್ಟ್ ಆ ಆದೇಶವನ್ನು ಹೊರಡಿಸಿದೆ. ಏಳು ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗೆ ಭಾರತೀ ದಂಡಸಂಹಿತೆಯ ಸೆಕ್ಷನ್ 35 (3)ರ ಅನ್ವಯ ಬಂಧನ ನೋಟಿಸ್ ಜಾರಿಗೊಳಿಸಬಹುದೇ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries