HEALTH TIPS

S I R : ಗುಜರಾತ್, ಲಕ್ಷದ್ವೀಪ, ಪುದುಚೇರಿಯಲ್ಲಿ ಮತದಾರರ ಪಟ್ಟಿಯಿಂದ 69 ಲಕ್ಷ ಮತದಾರರು ಹೊರಕ್ಕೆ: ಚುನಾವಣಾ ಆಯೋಗದ ಅಂಕಿ-ಅಂಶಗಳಲ್ಲಿ ಬಹಿರಂಗ

ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ ಬಳಿಕ, ಗುಜರಾತ್, ಲಕ್ಷದ್ವೀಪ ಮತ್ತು ಪುದುಚೇರಿಯ ಮತದಾರರ ಪಟ್ಟಿಗಳಿಂದ ಸುಮಾರು 69 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಚುನಾವಣಾ ಆಯೋಗವು ಶುಕ್ರವಾರ ಈ ಸಂಬಂಧಿ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ.

ಕಳೆದ ವರ್ಷದ ಅಕ್ಟೋಬರ್ 27ರಂದು ವಿಶೇಷ ತೀವ್ರ ಪರಿಷ್ಕರಣೆಯನ್ನು ಘೋಷಿಸಿದ ಬಳಿಕ, ಗುಜರಾತ್ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ಮತದಾರರ ಸಂಖ್ಯೆ 5.19 ಕೋಟಿ ಆಗಿತ್ತು. ಪರಿಷ್ಕರಣೆಯ ಬಳಿಕ ಪ್ರಕಟಿಸಲಾದ ಅಂತಿಮ ಪಟ್ಟಿಗಳಲ್ಲಿ ಒಟ್ಟು ಮತದಾರರ ಸಂಖ್ಯೆ 4.50 ಕೋಟಿ ಆಗಿದೆ. ಅಂದರೆ ಮತದಾರರ ಸಂಖ್ಯೆ ಮೊದಲಿನ ಪಟ್ಟಿಗಿಂತ 68.9 ಲಕ್ಷ ಕಡಿಮೆ ಆಗಿದೆ.

ಎಸ್‌ಐಆರ್ ಮೊದಲು, ಗುಜರಾತ್ ಮತದಾರರ ಪಟ್ಟಿಯಲ್ಲಿ 5.08 ಕೋಟಿ ಮತದಾರರಿದ್ದಿರು. ಈಗ ಪಟ್ಟಿಯು 4.40 ಕೋಟಿಗೆ ಇಳಿದಿದೆ. ಪಟ್ಟಿಯಿಂದ 68.12 ಲಕ್ಷ, ಅಂದರೆ 13.40 ಶೇಕಡ ಮತದಾರರು ಹೊರಬಿದ್ದಿದ್ದಾರೆ.

ಲಕ್ಷದ್ವೀಪದಲ್ಲಿ, ಮೊದಲು 57,813 ಮತದಾರರಿದ್ದರು. ಈಗ ಅದು 57,607ಕ್ಕೆ ಇಳಿದಿದೆ. 206, ಅಂದರೆ 0.36 ಶೇಕಡ ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಚುನಾವಣೆಗೆ ಸಜ್ಜಾಗುತ್ತಿರುವ ಪುದುಚೇರಿಯಲ್ಲಿ, ಎಸ್‌ಐಆರ್‌ಗಿಂತ ಮೊದಲು 10.21 ಲಕ್ಷ ಮತದಾರರಿದ್ದರು. ಈಗ ಅದು 9.44 ಲಕ್ಷಕ್ಕೆ ಇಳಿದಿದೆ. 7.57 ಶೇಕಡ ಮತದಾರರು ಹೊರಬಿದ್ದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries