HEALTH TIPS

19 ರಂದು ಮಧೂರು ಕ್ಷೇತ್ರ ಸಮಗ್ರ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ, ವಸಂತಮಾಸದ ಪೂಜೆಗೆ ಚಾಲನೆ-ಶ್ರೀದೇವರಿಗೆ ಸ್ವರ್ಣದ ಕೈಬಟ್ಟಲು, ಕಲಶಪಾತ್ರೆ ಸಮರ್ಪಣೆ

ಮಧೂರು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆ ಮತ್ತು ವಸಂತ ಮಾಸದ ಪೂಜಾ ಕಾರ್ಯಕ್ರಮಗಳ ಉದ್ಘಾಟನೆ ಮಾ. 19ರಂದು ಬೆಳಗ್ಗೆ 10ಕ್ಕೆ ದೇವಾಲಯದಲ್ಲಿ ಜರುಗಲಿದೆ. 


ಶ್ರೀದೇವರಿಗೆ ಸ್ವರ್ಣದ ಕೈಬಟ್ಟಲು ಹಾಗೂ ಕಲಶಪಾತ್ರೆ ಸಮರ್ಪಣೆ, ದೇವಸ್ಥಾನ ವಠಾರದಲ್ಲಿ ನೂತನವಾಗಿ ನಿರ್ಮಿಸಲಾದ ಬೊಡ್ಡಜ್ಜ ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ, ದೇವಾಲಯ ಹೊರಾಂಗಣದಲ್ಲಿ ನಿರ್ಮಿಸಿದ ಶಾಶ್ವತ ಚಪ್ಪರ, ಭದ್ರತಾ ಕೊಠಡಿಯ ಉದ್ಘಾಟನೆ ನಡೆಯುವುದು.

ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭಾಗ್ ಅಧ್ಯಕ್ಷತೆ ವಹಿಸುವರು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಉದ್ಘಾಟನಾ ಸಮಾರಂಭ ನೆರವೇರಿಸಿ, ಆಶೀರ್ವಚನ ನೀಡುವರು. ಶ್ರೀಕ್ಷೇತ್ರದ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ, ದೇವಸ್ಥಾನದ ಪವಿತ್ರಪಾಣಭಿ ರತನ್‍ಕುಮಾರ್ ಕಾಮಡ ದಿವ್ಯ ಉಪಸ್ಥಿತರಿರುವರು.

ಬೆಳಗ್ಗೆ 11.30ರಿಂದ ಭಜನೆ ನಡೆಯುವುದು. ಸಂಜೆ 6ಕಕೆ ಆರಂಭಗೊಳ್ಳುವ ವಸಂತ ಮಾಸ ಭಜನಾ ಸಂಕೀರ್ತನೆ ಕಾರ್ಯಕ್ರಮಕ್ಕೆ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸವಾಮೀಜಿ ಚಾಲನೆ ನೀಡಿ, ಆಶೀರ್ವಚನ ನೀಡುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries