ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಎಲ್ ಡಬ್ಲ್ಯು ಕೇವಲ ಭಾರತೀಯ ರೈಲ್ವೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವುದಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಾಂತ್ರಿಕ ವಿಶ್ವಾಸಾರ್ಹತೆಯನ್ನು ಗಳಿಸಿದೆ ಎಂದು ಹೇಳಿದರು.
11 ದೇಶಗಳಿಗೆ ರಫ್ತು: ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್ ದೃಷ್ಟಿಕೋನದ ಸಾಕಾರವಾಗಿ ಬಿಎಲ್‌ಡಬ್ಲ್ಯು ಇದುವರೆಗೆ 11 ದೇಶಗಳಿಗೆ 182 ಡಿಸೇಲ್ ರೈಲು ಎಂಜಿನ್ ಗಳನ್ನು ಯಶಸ್ವಿಯಾಗಿ ರಫ್ತು ಮಾಡಿದೆ ಎಂದು ಮಾಹಿತಿ ನೀಡಿದರು.
ಮೊಝಾಬಿಕ್ ದೇಶಕ್ಕೆ ಬಿಎಲ್ ಡಬ್ಲ್ಯುನ 10ನೇ 3300 ಎಚ್‌ಪಿಎಸಿ ಡಿಸೇಲ್-ಎಸಿ ಡಿಸೇಲ್ ಎಲೆಕ್ಟ್ರಿಕ್ ಲೋಕೋಮೋಟಿವ್ ಅನ್ನು 2026 ಫೆ.21ರಂದು ಯಶಸ್ವಿಯಾಗಿ ರಫ್ತು ಮಾಡಲಾಗಿದೆ ಎಂದರು.
ಇದುವರೆಗೂ ಮೊಝಾಬಿಕ್, ಸುಡಾನ್, ಅಂಗೋಲಾ, ಮ್ಯಾನ್ಮಾರ್, ತಾಂಜಾನಿಯಾ, ವಿಯೆಟ್ನಾಂ, ಬಾಂಗ್ಲಾದೇಶ, ಶ್ರೀಲಂಕಾ ,ಮಲೇಷ್ಯಾ , ಸೆನೆಗಲ್, ಮಾಲಿ ಸೇರಿದಂತೆ 11 ದೇಶಗಳಿಗೆ ರೈಲು ಎಂಜಿನ್ ಗಳನ್ನು ರಫ್ತು ಮಾಡಲಾಗಿದೆ ಎಂದರು
ಬಿಎಲ್‌ಡಬ್ಲ್ಯು ಪ್ಯಾಸೆಂಜರ್ ಲೋಕೋಮೋಟಿವ್ (ಡಬ್ಲ್ಯು ಎಪಿ 7), ಸರಕು ಸಾಗಣೆ ಎಲೆಕ್ಟ್ರಿಕ್ ಲೋಕೊಮೋಟಿವ್, ಅಮೃತ ಭಾರತ್ ಲೋಕೋಮೋಟಿವ್ ಸೇರಿದಂತೆ ಮೂರು ವಿಧದ ರೈಲು ಎಂಜಿನ್ ಗಳನ್ನು ತಯಾರಿಸುತ್ತದೆ ಎಂದು ವಿವರಿಸಿದರು.
ಪ್ರಧಾನ ಮುಖ್ಯ ಎಲೆಕ್ಟ್ರಿಕ್ ಎಂಜಿನಿಯರ್ ಸುಶೀಲ್ ಕುಮಾರ್ ಶ್ರೀವಾಸ್ತವ, ಪ್ರಧಾನ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ವಿವೇಕ್ ಶೀಲ್, ಉಪ ಜನರಲ್ ಮ್ಯಾನೇಜರ್ ಸಾಗರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ಕುಮಾರ್, ಪಿಐಬಿ ಬೆಂಗಳೂರಿನ ಸಹಾಯಕ ನಿರ್ದೇಶಕಿ ಕರಿಷ್ಮಾ ಪಂತ್ ಇತರರು ಇದ್ದರು.

