ನವದೆಹಲಿ: ಮುಂಬರುವ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ.
ಛತ್ತೀಸಗಢದಿಂದ ಫೂಲವ್ ದೇವಿ ನೇಟಂ, ಹರಿಯಾಣದಿಂದ ಕರಮ್‌ವೀರ್ ಸಿಂಗ್ ಬೌದ್ಧ್, ಹಿಮಾಚಲ ಪ್ರದೇಶದಿಂದ ಅನುರಾಗ್ ಶರ್ಮಾ, ತಮಿಳುನಾಡಿನಿಂದ ಎಂ. ಕ್ರಿಸ್ಟೊಫರ್ ತಿಲಕ್ ಹಾಗೂ ತೆಲಂಗಾಣದಿಂದ ಅಭಿಷೇಕ್ ಮನು ಸಿಂಘ್ವಿ ಹಾಗೂ ವೆಮ್ ನರೇಂದ್ರ ರೆಡ್ಡಿ ಅವರ ಹೆಸರನ್ನು ಅಖೈರುಗೊಳಿಸಲಾಗಿದೆ.
ಈ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಗುರುವಾರ ಬಿಡುಗಡೆಗೊಳಿಸಿದೆ.
ಇದೇ ತಿಂಗಳ 16 ರಂದು ಮತದಾನ ನಡೆಯಲಿದೆ.

