ಪೆರ್ಲ: ಭಾಷಾ ಮಸೂದೆ ವಿರುದ್ಧ ಮಾ.28ರಂದು ಕಾಸರಗೋಡು ತಾಲೂಕು ಕಚೇರಿ ಎದುರು ಕರ್ನಾಟಕ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ ಹಕ್ಕೊತ್ತಾಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪೆರ್ಲದಲ್ಲಿ ಮಾ 25ರಂದು ಪ್ರಾದೇಶಿಕವಾಗಿ ಹಕ್ಕೊತ್ತಾಯ ಮೆರವಣಿಗೆ ನಡೆಸಲು ತೀರ್ಮಾನಿಸಲಾಯಿತು. ವ್ಯಾಪಾರ ಭವನ ವಠಾರದಿಂದ ಹೊರಡುವ ಹಕ್ಕೊತ್ತಾಯ ಮೆರವಣಿಗೆ ಪೆರ್ಲ ಗಾಂಧಿ ಕಟ್ಟೆಯಲ್ಲಿ ಮುಕ್ತಾಯಗೊಳ್ಳಲಿದೆ.
ಕಾರ್ಯಕ್ರಮದ ಪೂರ್ವಭಾವಿಯಾಗಿ ಭಾನುವಾರ ಪೆರ್ಲ ವ್ಯಾಪಾರ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ್ ಜೆ. ಎಸ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಕ್ಕೊತ್ತಾಯ ಕಾರ್ಯಕ್ರಮದ ಯಶಸ್ಸಿಗಾಗಿ ತಾತ್ಕಾಲಿಕ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಆಯಿಷಾ ಎ.ಎ, ಸಂಚಾಲಕರಾಗಿ ಸುಭಾಷ್ ಪೆರ್ಲ, ಸಹ ಸಂಚಾಲಕರಾಗಿ ಶರತ್ಚಂದ್ರ ಶೆಟ್ಟಿ, ಜಿ. ಕೃಷ್ಣರಾಜ ಗೋಳಿತ್ತಡ್ಕ, ವೇಣುಗೋಪಾಲ. ಎಸ್, ವಿಜಯಕುಮಾರ್, ಕಮಲಾಕ್ಷ ನಲ್ಕ, ಶರತ್ ಕುಮಾರ್ ಎಂ, ಪ್ರಚಾರ ಸಮಿತಿಗೆ ಬಿ.ಪಿ. ಶೇಣಿ, ಅಶ್ರಫ್ ಮತ್ರ್ಯ, ವನಜಾಕ್ಷಿ ಪಿ ಚೆಂಬ್ರಕಾನ ಅವರನ್ನು ಆಯ್ಕೆ ಮಾಡಲಾಯಿತು.
ಎಣ್ಮಕಜೆ ಗ್ರಾ. ಪಂ. ಸದಸ್ಯರಾದ ಆಯಿಷಾ ಎ.ಎ., ಶರತ್ಚಂದ್ರ ಶೆಟ್ಟಿ, ನಿವೃತ್ತ ಪ್ರಾಂಶುಪಾಳ ಬೇ.ಸಿ ಗೋಪಾಲಕೃಷ್ಣ ಭಟ್, ಬಿ.ಪಿ ಶೇಣಿ, ಮಹಮ್ಮದ್ ಆಲಿ ಪೆರ್ಲ, ಉಮೇಶ್ ಕೆ. ಪೆರ್ಲ, ರಿಶಾದ್ ಪಿ.ಯಂ.ಎ, ವಿದ್ಯಾರತ್ನ ಪಿ. ಬಿ ಮೊದಲಾದವರು ಉಪಸ್ಥಿತರಿದ್ದರು.



