HEALTH TIPS

ಬಯೋಇ3 ನೀತಿಯು ಕೇಂದ್ರ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ: ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್

ತಿರುವನಂತಪುರಂ: ಬಯೋಇ3 ನೀತಿಯು ಕೇಂದ್ರ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅಭಿಪ್ರಾಯಪಟ್ಟರು.

ಅವರು ಬ್ರಿಕ್ ಆರ್.ಜಿ.ಸಿ.ಬಿಯ ಅಕ್ಕುಲಂ ಕ್ಯಾಂಪಸ್‍ನಲ್ಲಿ ನಡೆದ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಗೈದು ಮಾತನಾಡಿದರು. 


ಅಕ್ಕುಲಂ ಕ್ಯಾಂಪಸ್‍ನಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಕರೆಂಟ್ ಗುಡ್ ಮ್ಯಾನುಫ್ಯಾಕ್ಚರಿಂಗ್ ಪ್ರಾಕ್ಟೀಸ್ ಕೇಂದ್ರದ ಅಡಿಪಾಯವನ್ನು ಅವರು ಹಾಕಿದರು. ಅವರು ಪುನರ್ಸಂಯೋಜಿತ ಕೋಶಗಳು ಮತ್ತು ಸಂವೇದಕಗಳ ರಾಷ್ಟ್ರೀಯ ಕೇಂದ್ರವನ್ನು ಉದ್ಘಾಟಿಸಿದರು. ಇದು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸುವ ಅತ್ಯಾಧುನಿಕ ಕೇಂದ್ರವಾಗಿದೆ.ಪರಮಾಣು ವೈದ್ಯಕೀಯ ಸಂಶೋಧನೆಯಲ್ಲಿ ಸಹಯೋಗವನ್ನು ಹೆಚ್ಚಿಸಲು ಸಾಕಷ್ಟು ಅವಕಾಶವಿದೆ. ಕಳೆದ ದಶಕದಲ್ಲಿ, ದೇಶದ ಎಲ್ಲಾ ವೈಜ್ಞಾನಿಕ ಕ್ಷೇತ್ರಗಳು, ವಿಶೇಷವಾಗಿ ಜೈವಿಕ ತಂತ್ರಜ್ಞಾನ ವಲಯವು ಹೆಚ್ಚಿನ ಆದ್ಯತೆಯನ್ನು ಪಡೆದಿದೆ ಎಂದು ಸಚಿವರು ಹೇಳಿದರು. 'ಬಯೋಇ3 ನೀತಿ' ಎಂಬ ನಿರ್ದಿಷ್ಟ ಜೈವಿಕ ತಂತ್ರಜ್ಞಾನ ನೀತಿಯನ್ನು ಪ್ರಾರಂಭಿಸಲು ಉಪಕ್ರಮವನ್ನು ತೆಗೆದುಕೊಂಡ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಈ ವರ್ಷದ ಬಜೆಟ್‍ನಲ್ಲಿ ಬಯೋಫಾರ್ಮಾ ಶಕ್ತಿ ಮಿಷನ್ ಘೋಷಣೆಯು ಜೈವಿಕ ತಂತ್ರಜ್ಞಾನದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಇವು ಯಾವುದೇ ದೇಶದ ಆರ್ಥಿಕತೆಯ ನಿರ್ಣಾಯಕ ಅಂಶಗಳಾಗಿವೆ.

ಹೊಸ ರಾಷ್ಟ್ರೀಯ ಪುನಸರ್ಂಯೋಜಿತ ಕೋಶಗಳು ಮತ್ತು ಸಂವೇದಕಗಳ ಕೇಂದ್ರವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಹಾಯ ಮಾಡುವ 'ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೋಶಗಳ' ವಿಶ್ವದ ಅತಿದೊಡ್ಡ ಸಂಗ್ರಹಗಳಲ್ಲಿ ಒಂದಾಗಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಯ ವ್ಯಾಪ್ತಿ ಮತ್ತು ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ, ಖಉಅಃ ಶೈಕ್ಷಣಿಕ ಮತ್ತು ಉದ್ಯಮಶೀಲ ಕ್ಷೇತ್ರಗಳಲ್ಲಿ ಹೊಸ ಆಲೋಚನೆಗಳನ್ನು ನೀಡಲು ಸಾಧ್ಯವಾಗಿದೆ. ಇದು ಸ್ಟಾರ್ಟ್‍ಅಪ್‍ಗಳು ಸೇರಿದಂತೆ ಅನೇಕ ಉದ್ಯಮಗಳ ಹೊರಹೊಮ್ಮುವಿಕೆಗೆ ಕಾರಣವಾಗಿದೆ. ಆಣ್ವಿಕ ಜೀವಶಾಸ್ತ್ರ, ರೋಗ ಜೀವಶಾಸ್ತ್ರ, ಜೀನೋಮಿಕ್ಸ್ ಮತ್ತು ಕ್ಯಾನ್ಸರ್ ಸಂಶೋಧನೆಯಲ್ಲಿ ಖಉಅಃ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಅವರು ಗಮನಿಸಿದರು.

ಕುಸಾಟ್‍ನ ಪ್ರೊ. ವಿ. ಪಿ. ಎನ್. ನಂಬೂರಿ ಬರೆದ 'ಕ್ವಾಂಟಮ್ ಫಿಸಿಕ್ಸ್: ಒನ್ ಹಂಡ್ರೆಡ್ ಮ್ಯಾಜಿಕಲ್ ಇಯರ್ಸ್' ಪುಸ್ತಕವನ್ನು ಸಚಿವರು ಬಿಡುಗಡೆ ಮಾಡಿದರು.

ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಡಾ. ರಾಜೇಶ್ ಗೋಖಲೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸರ್ಕಾರದ ಬಯೋಇ3 ನೀತಿಯ ಭಾಗವಾಗಿ ಜೈವಿಕ ಉತ್ಪಾದನೆಯು ತಾಂತ್ರಿಕ ಅಭಿವೃದ್ಧಿ ಮತ್ತು ವಾಣಿಜ್ಯೀಕರಣವನ್ನು ವೇಗಗೊಳಿಸುತ್ತದೆ ಎಂದು ಅವರು ಹೇಳಿದರು. ಊPಗಿ ಲಸಿಕೆ ಕುರಿತು ಖಉಅಃ ಯಲ್ಲಿನ ಸಂಶೋಧನೆಯು ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ. ಸಾಮಾಜಿಕವಾಗಿ ಪ್ರಸ್ತುತವಾದ ಚಟುವಟಿಕೆಗಳು ಖಉಅಃ ಯ ವಿಶಿಷ್ಟ ಲಕ್ಷಣಗಳಾಗಿವೆ ಎಂದು ಡಾ. ರಾಜೇಶ್ ಗೋಖಲೆ ಹೇಳಿದರು.

ಬ್ರಿಕ್ ಆರ್.ಜಿ.ಸಿ.ಬಿಯ ನೋಡಲ್ ಅಧಿಕಾರಿ ಡಾ. ಜ್ಯೋತಿ ಲೋಗಾನಿ ಸ್ವಾಗತಿಸಿದರು. ಕಳೆದ 35 ವರ್ಷಗಳಲ್ಲಿ ರಾಷ್ಟ್ರೀಯ ಆರೋಗ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆಗಳನ್ನು ನೀಡಿರುವ ಮಾದರಿ ಸಂಸ್ಥೆಯಾಗಿ ಬ್ರಿಕ್ ಆರ್.ಜಿ.ಸಿ.ಬಿ ಎದ್ದು ಕಾಣುತ್ತದೆ ಎಂದು ಅವರು ಹೇಳಿದರು.

ಬ್ರಿಕ್ ಆರ್.ಜಿ.ಸಿ.ಬಿಯ ನಿರ್ದೇಶಕ ಡಾ. ಟಿ.ಆರ್. ಸಂತೋಷ್ ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿದರು. ರಾಷ್ಟ್ರೀಯ ಪುನಸರ್ಂಯೋಜಿತ ಕೋಶಗಳು ಮತ್ತು ಸಂವೇದಕಗಳ ಕೇಂದ್ರವು ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಕೋಶ ಎಂಜಿನಿಯರಿಂಗ್ ಮೂಲಕ ಪುನಸರ್ಂಯೋಜಿತ ಕೋಶ ಮಾದರಿಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಹೊಸ ಕೇಂದ್ರವು ಕ್ಯಾನ್ಸರ್ ತಪಾಸಣೆಗಳನ್ನು ವೆಚ್ಚ-ಪರಿಣಾಮಕಾರಿ ದರದಲ್ಲಿ ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಡಾ. ಸಂತೋಷ್ ಹೇಳಿದರು.

ಬ್ರಿಕ್ ಆರ್.ಜಿ.ಸಿ.ಬಿಯ ಸಂಶೋಧನಾ ಆಡಳಿತದ ಡೀನ್ ಡಾ. ಆಶಾ ನಾಯರ್ ವಂದಿಸಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries