HEALTH TIPS

50 ವರ್ಷದ ಬಳಿಕ ಅಮೆರಿಕದಲ್ಲಿ ತೈಲ ಸಂಸ್ಕರಣಾ ಘಟಕ; ರಿಲಯನ್ಸ್‌ ಹೂಡಿಕೆ

ವಾಷಿಂಗ್ಟನ್‌ (PTI): '50 ವರ್ಷಗಳ ಬಳಿಕ ಅಮೆರಿಕದಲ್ಲಿ ಹೊಸ ತೈಲ ಸಂಸ್ಕರಣಾ ಘಟಕ ನಿರ್ಮಾಣಗೊಳ್ಳಲಿದ್ದು, ಭಾರತದ ಉದ್ಯಮಿ ಮುಕೇಶ್‌ ಅಂಬಾನಿ ಅವರು ಪಾಲುದಾರಿಕೆ ಹೊಂದಲಿದ್ದಾರೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

'ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡದು' ಎಂದು ಈ ವೇಳೆ ತಿಳಿಸಿದ್ದಾರೆ.

ಅಮೆರಿಕದ ಟೆಕ್ಸಾಸ್‌ ರಾಜ್ಯದ ಬ್ರೌನ್ಸ್‌ವಿಲ್ಲೆಯಯಲ್ಲಿ ಈ ಘಟಕ ನಿರ್ಮಾಣವಾಗಲಿದ್ದು, ಅಮೆರಿಕದ ಶೆಲ್‌ ಆಯಿಲ್‌ ನಿರ್ವಹಣಾ ವ್ಯವಸ್ಥೆಯ ರೀತಿಯಲ್ಲಿ ವಿನ್ಯಾಸ ಮಾಡಲಾಗುವುದು ಎಂದು ಈ ಯೋಜನೆಯನ್ನು ಪ್ರಾಯೋಗಿಕವಾಗಿ ನಿರ್ವಹಿಸುತ್ತಿರುವ ಅಮೆರಿಕ ಫಸ್ಟ್‌ ರಿಫೈನಿಂಗ್‌ (ಎಎಫ್‌ಆರ್) ತಿಳಿಸಿದೆ.

ಇಲ್ಲಿ ತಯಾರಾಗುವ ತೈಲವನ್ನು 20 ವರ್ಷಗಳ ಅವಧಿಗೆ ಖರೀದಿಸಲು ಸಹಿ ಹಾಕಲಾಗಿದ್ದು, ಈ ವರ್ಷದ ಎರಡನೇ ಅವಧಿಯಲ್ಲಿ ಶಿಲಾನ್ಯಾಸ ನಡೆಸಲು ನಿರ್ಧರಿಸಲಾಗಿದೆ.

'ರಿಲಯನ್ಸ್ ಪಾಲುದಾರಿಕೆಯಲ್ಲಿ ಈ ಯೋಜನೆಯು ಆರಂಭಗೊಳ್ಳಲಿದೆ. 300 ಬಿಲಿಯನ್‌ ಡಾಲರ್‌ ಹೂಡಿಕೆಯ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 10 ಅಂಕಿಯ ಮೌಲ್ಯ ಹೊಂದಿರುವ ಜಾಗತಿಕ ಸಂಸ್ಥೆಯೊಂದರಿಂದ 9 ಅಂಕಿಯ ಹೂಡಿಕೆ ಆಗಲಿದೆ' ಎಂದು ಡೊನಾಲ್ಡ್‌ ಟ್ರಂಪ್‌ ಅವರು 'ಟ್ರೂಥ್‌' ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಒಪ್ಪಂದದ ಕುರಿತಂತೆ ರಿಲಯನ್ಸ್‌ ಸಂಸ್ಥೆಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಿಲಯನ್ಸ್‌ ಸಂಸ್ಥೆಯು ಗುಜರಾತ್‌ನ ಜಾಮನಗರದಲ್ಲಿ ವಿಶ್ವದ ಅತಿ ದೊಡ್ಡ ತೈಲ ಸಂಸ್ಕರಣಾ ಘಟಕವನ್ನು ಹೊಂದಿದೆ. ಇಲ್ಲಿ ದಿನವೊಂದಕ್ಕೆ 12.40 ಲಕ್ಷ ಬ್ಯಾರಲ್‌ಗಳಷ್ಟು ತೈಲ ಸಂಸ್ಕರಣೆ ಮಾಡಲಾಗುತ್ತಿದೆ. ಇದೀಗ ಅಮೆರಿಕದಲ್ಲಿ ಮೊಟ್ಟ ಮೊದಲ ತೈಲ ಸಂಸ್ಕರಣಾ ಘಟಕದ ನಿರ್ಮಾಣಕ್ಕೆ ಕೈಹಾಕಿದೆ.

ಒಂದೊಮ್ಮೆ ಈ ಘಟಕವು ಪೂರ್ಣಗೊಂಡರೆ, 1977ರಲ್ಲಿ ಲೂಸಿಯಾನದ ಮ್ಯಾರಾಥಾನ್ಸ್‌ ಗ್ಯಾರಿವಿಲ್ಲೆಯಲ್ಲಿ ನಿರ್ಮಿತವಾಗಿದ್ದ ಅತಿ ದೊಡ್ಡ ತೈಲ ಸಂಸ್ಕರಣಾ ನಂತರದಲ್ಲಿ ತಲೆ ಎತ್ತಲಿರುವ ಬೃಹತ್ ಘಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ. ಯೋಜನೆ ಮುಗಿಯುವ ಅವಧಿಯ ಬಗ್ಗೆ ಟ್ರಂಪ್‌ ಅಥವಾ ಎಎಫ್‌ಆರ್‌ ಸಂಸ್ಥೆ ಯಾವುದೇ ‍ಪ್ರತಿಕ್ರಿಯೆ ನೀಡಿಲ್ಲ.

ಉದ್ಯಮ ತಜ್ಞರ ಪ್ರಕಾರ, ಈ ಯೋಜನೆ ಪೂರ್ಣಗೊಳಿಸಲು 4ರಿಂದ 5 ಬಿಲಿಯನ್‌ ಡಾಲರ್‌ ವೆಚ್ಚವಾಗಲಿದೆ ಎಂದು ಊಹಿಸಲಾಗಿದೆ.

ಅಮೆರಿಕವು ಪ್ರಸಕ್ತ 132 ತೈಲ ಸಂಸ್ಕರಣಾ ಘಟಕಗಳನ್ನು ಹೊಂದಿದ್ದು, ದಿನವೊಂದಕ್ಕೆ 18.4 ಮಿಲಿಯನ್‌ ಬ್ಯಾರೆಲ್‌ಗಳನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕದ ಇಂಧನ ಆಡಳಿತ ವಿಭಾಗವು ತಿಳಿಸಿದೆ. ಈಗಿರುವ ಬಹುತೇಕ ಘಟಕಗಳು ದಶಕಗಳ ಹಿಂದೆ ನಿರ್ಮಿಸಿದ್ದು, ನಿರ್ವಹಣಾ ವೆಚ್ಚವೂ ದುಬಾರಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries