`ನಮ್ಮ ರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ನಡೆಸಲಾದ ಝಿಯೋನಿಸ್ಟ್-ಅಮೆರಿಕನ್ ಭಯೋತ್ಪಾದಕ ದಾಳಿಗಳಲ್ಲಿ 131 ನಗರಗಳಲ್ಲಿ ವ್ಯಾಪಕ ನಾಶ-ನಷ್ಟ ಸಂಭವಿಸಿದೆ ಮತ್ತು ವಿಷಾದನೀಯವಾಗಿ 555 ಮಂದಿ ಕೊಲ್ಲಲ್ಪಟ್ಟಿದ್ದಾರೆ.
ಕ್ಷಿಪ್ರವಾಗಿ ಹೆಚ್ಚುತ್ತಿರುವ ಪ್ರಾಣ ಹಾನಿಯ ಸಂಖ್ಯೆಯು ಘರ್ಷಣೆಯು ತ್ವರಿತವಾಗಿ ಪ್ರಾದೇಶಿಕ ಬಿಕ್ಕಟ್ಟಾಗಿ ಉಲ್ಬಣಗೊಂಡಿರುವುದನ್ನು ಸೂಚಿಸುತ್ತದೆ. ಗಾಯಾಳುಗಳ ಬಗ್ಗೆ ಇತ್ತೀಚಿನ ಮಾಹಿತಿ ಲಭಿಸಿಲ್ಲ. ರವಿವಾರದವರೆಗೆ 747 ಮಂದಿ ಗಾಯಗೊಂಡಿದ್ದರು' ಎಂದು ರೆಡ್‍ಕ್ರೆಸೆಂಟ್ ಸೋಮವಾರ ಹೇಳಿದೆ.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನ್‍ನ ಗಾಂಧಿ ಆಸ್ಪತ್ರೆಗೆ ಹಾನಿ
ರವಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಉತ್ತರ ಟೆಹ್ರಾನ್‍ನಲ್ಲಿರುವ ಗಾಂಧಿ ಆಸ್ಪತ್ರೆಗೆ ಹಾನಿಯಾಗಿರುವುದಾಗಿ ವರದಿಯಾಗಿದೆ.
ಇನ್‍ಕ್ಯುಬೇಟರ್(ಅಕಾಲಿಕವಾಗಿ ಜನಿಸುವ ಶಿಶುಗಳನ್ನು ಬೆಚ್ಚಗಿನ ತಾಪಮಾನದಲ್ಲಿ ಇರಿಸುವ ಸಾಧನ)ನಲ್ಲಿದ್ದ ಮಗು ಹಾಗೂ ಇತರ ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ ಎಂದು ವರದಿ ಹೇಳಿದೆ.

