HEALTH TIPS

ದೇಶದಲ್ಲಿ ಶೇ.74 ರಷ್ಟು ಮಕ್ಕಳು ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಅನಗತ್ಯವಾಗಿ ಪರದೆಯ ಮುಂದೆ ಕಳೆಯುತ್ತಾರೆ-ಎನ್‍ಸಿಸಿಎಸ್ ಅಧ್ಯಯನ ವರದಿ

ದೇಶದಲ್ಲಿ ಶೇ.74 ರಷ್ಟು ಶಾಲಾ ವಿದ್ಯಾರ್ಥಿಗಳು ದಿನಕ್ಕೆ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ತಮ್ಮ ಮೊಬೈಲ್ ಪೋನ್ ಅಥವಾ ಕಂಪ್ಯೂಟರ್‍ಗಳನ್ನು ಅಧ್ಯಯನೇತರ ಮತ್ತು ಶೈಕ್ಷಣಿಕ ಉದ್ದೇಶಗಳಲ್ಲದೆ ಬಳಸುತ್ತಾರೆ ಎಂದು ಅಧ್ಯಯನವೊಂದು ಕಂಡುಹಿಡಿದಿದೆ. ಈ ಪೈಕಿ ಶೇ.21 ರಷ್ಟು ಜನರು ಮೊಬೈಲ್, ಗೇಮಿಂಗ್ ಪ್ಲಾಟ್‍ಫಾರ್ಮ್‍ಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಾಲ್ಕು ಗಂಟೆಗಳಿಗಿಂತ ಹೆಚ್ಚು ಸಮಯ ಕಳೆಯುತ್ತಾರೆ. 


ನ್ಯಾಷನಲ್ ಕೌನ್ಸಿಲ್ ಆಫ್ ಸಿಬಿಎಸ್‍ಇ ಸ್ಕೂಲ್ಸ್ (ಎನ್‍ಸಿಸಿಎಸ್) ನಡೆಸಿದ ಅಧ್ಯಯನದಲ್ಲಿ ಈ ಸಂಶೋಧನೆಗಳನ್ನು ಮಾಡಲಾಗಿದೆ. ಶಿಕ್ಷಕರು, ಪೋಷಕರು ಮತ್ತು ಶಾಲಾ ಅಧಿಕಾರಿಗಳು ಸೇರಿದಂತೆ 6,30,000 ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಎನ್‍ಸಿಸಿಎಸ್ ಪ್ರಧಾನ ಕಾರ್ಯದರ್ಶಿ ಡಾ. ಇಂದಿರಾ ರಾಜನ್ ಹೇಳಿದ್ದಾರೆ.

ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಶೇ.69 ರಷ್ಟು ಮಂದಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ತರಗತಿಯ ಗಮನ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ. ಶೇ.63 ರಷ್ಟು ವಿದ್ಯಾರ್ಥಿಗಳು ಅಸಹಿಷ್ಣುತೆ, ಆತಂಕ, ಖಿನ್ನತೆ ಮತ್ತು ಸಾಮಾಜಿಕವಾಗಿ ಹಿಂದೆ ಸರಿಯುವಂತಹ ನಡವಳಿಕೆಯ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಶೇ.66 ರಷ್ಟು ಜನರು ಹೊರಾಂಗಣ ಕ್ರೀಡೆಗಳು ಮತ್ತು ನೇರ ಸಾಮಾಜಿಕ ಸಂವಹನಗಳಲ್ಲಿ ಇಳಿಕೆಯನ್ನು ವರದಿ ಮಾಡಿದ್ದಾರೆ.

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಶೈಕ್ಷಣಿಕ ಏಕಾಗ್ರತೆ ಮತ್ತು ಸಮಗ್ರ ವ್ಯಕ್ತಿತ್ವ ಬೆಳವಣಿಗೆಯನ್ನು ರಕ್ಷಿಸಲು ಜಾರಿಗೆ ತರಬಹುದಾದ ಶಿಫಾರಸುಗಳು ಮತ್ತು ನೀತಿ ಶಿಫಾರಸುಗಳನ್ನು ಓಅಅS ಸರ್ಕಾರಕ್ಕೆ ಸಲ್ಲಿಸಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಅನಿಯಂತ್ರಿತ ಡಿಜಿಟಲ್ ಬಳಕೆಯನ್ನು ಮಿತಿಗೊಳಿಸಲು ರಾಷ್ಟ್ರೀಯ ಮಾರ್ಗಸೂಚಿಗಳು ಅಗತ್ಯವಿದೆ. ರಾಷ್ಟ್ರೀಯ ಮಕ್ಕಳ ಡಿಜಿಟಲ್ ಸುರಕ್ಷತಾ ಚೌಕಟ್ಟನ್ನು ರೂಪಿಸಲು ಸಹ ಇದು ಶಿಫಾರಸು ಮಾಡಿದೆ.

ವರದಿ ಮತ್ತು ಶಿಫಾರಸುಗಳನ್ನು ಪ್ರಧಾನಿ, ಕೇಂದ್ರ ಶಿಕ್ಷಣ ಸಚಿವಾಲಯ, ಮುಖ್ಯಮಂತ್ರಿಗಳು ಮತ್ತು ಸಿಬಿಎಸ್‍ಇ ಅಧ್ಯಕ್ಷರಿಗೆ ರವಾನಿಸಲಾಗಿದೆ. 






Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries