HEALTH TIPS

'ಎಲ್‌ಜಿಪಿ ಶುಲ್ಕ' ಹೆಸರಿನಲ್ಲಿ ವಸೂಲಿ ಬೇಡ: ಸಿಸಿಪಿಎ ಎಚ್ಚರಿಕೆ

ನವದೆಹಲಿ: 'ಎಲ್‌ಜಿಪಿ ಶುಲ್ಕ' ಅಥವಾ 'ತೈಲ ದರದ ಮೇಲಿನ ಶುಲ್ಕ' ಎನ್ನುವ ಹೆಸರಿನಲ್ಲಿ ಶುಲ್ಕಗಳನ್ನು ಗ್ರಾಹಕರಿಂದ ಪಡೆದುಕೊಳ್ಳಬಾರದು. ಇಂಥ ಶುಲ್ಕಗಳನ್ನು ವಸೂಲಿ ಮಾಡುವುದು ಅಕ್ರಮ ವ್ಯಾಪಾರ ತಂತ್ರಗಾರಿಕೆಯಾಗುತ್ತದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಬುಧವಾರ ಎಚ್ಚರಿಕೆ ನೀಡಿದೆ.

'ಇಂಥ ಶುಲ್ಕಗಳನ್ನು ವಸೂಲಿ ಮಾಡುತ್ತಿರುವ ಕುರಿತು ಹಲವು ದೂರುಗಳು ನಮಗೆ ಬಂದಿವೆ. ಇದು ಗ್ರಾಹಕ ರಕ್ಷಣಾ ಕಾಯ್ದೆ, 2019ರ ಉಲ್ಲಂಘಟನೆ. ಉಪಹಾರ ತಯಾರಿಕೆಗೆ ತಗುಲುವ ವೆಚ್ಚವಲ್ಲದೆ ಬೇರೆ ವೆಚ್ಚಗಳನ್ನು ಗ್ರಾಹಕರಿಂದ ವಸೂಲಿ ಮಾಡಬಾರದು. ಹಣ ನೀಡುವಂತೆ ಗ್ರಾಹಕರನ್ನು ಒತ್ತಾಯ‍ಪಡಿಸಬಾರದು' ಎಂದು ಸಿಸಿಪಿಎ ಹೇಳಿದೆ.

'ವ್ಯಾಪಾರ ನಡೆಸುವಾಗ ತಗುಲುವ ಒಟ್ಟಾರೆ ಕಾರ್ಯಾಚರಣೆ ವೆಚ್ಚದಲ್ಲಿ ತೈಲ, ಎಲ್‌ಜಿಪಿ, ವಿದ್ಯುತ್‌ ಸೇರಿ ಇತರೆ ವೆಚ್ಚಗಳೂ ಸೇರಿಕೊಳ್ಳುತ್ತವೆ. ಉಪಾಹಾರದ ತಯಾರಿಕೆಗೆ ತಗುಲುವ ವೆಚ್ಚಕ್ಕೆ ತೈಲ ಅಥವಾ ಎಲ್‌ಜಿಪಿ ವೆಚ್ಚಗಳನ್ನು ಸೇರಿಸಬಾರದು' ಎಂದು ಸಿಸಿಪಿಎ ಸ್ಪಷ್ಟಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries