ಸೋಲ್: 'ಅಮೆರಿಕವು ಭಯೋತ್ಪಾದನೆಯನ್ನು ಪ್ರಚೋದಿಸುತ್ತದೆ. ಅಮೆರಿಕದ ವಿರುದ್ಧ ಏಳುತ್ತಿರುವ ವಿರೋಧಗಳನ್ನು ಒಗ್ಗೂಡಿಸುವಲ್ಲಿ ನಮ್ಮ ದೇಶವು ಪ್ರಮುಖ ಪಾತ್ರವಹಿಸಲಿದೆ' ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಸೋಮವಾರ ಹೇಳಿದರು.
ಸಂಸತ್ತಿನಲ್ಲಿ ಮಾತನಾಡುವ ವೇಳೆ ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಕುರಿತು ಕಿಮ್ ಪ್ರಸ್ತಾಪಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಉಲ್ಲೇಖಿಸದೇ ಮಾತನಾಡಿದ ಕಿಮ್, 'ಅವರ ಸಲಹೆಗಾರರು ಸಂಘರ್ಷವನ್ನು ಆಯ್ಕೆ ಮಾಡಿಕೊಳ್ಳುತ್ತಾರೋ? ಶಾಂತಿಯಿಂದ ಕೂಡಿ ಇರುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೊ? ಅವರಿಗೆ ಬಿಟ್ಟಿದ್ದು. ಅವರ ಯಾವ ಆಯ್ಕೆಗೂ ಪ್ರತಿಕ್ರಿಯಿಸಲು ನಾವು ಸಿದ್ಧರಿದ್ದೇವೆ' ಎಂದರು.

