HEALTH TIPS

ಆಚೇರಿ ಶ್ರೀ ಮಹಾವಿಷ್ಣು ದೇವಸ್ಥಾನ-ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಕಾಸರಗೋಡು: ಉತ್ತರ ಮಲಬಾರಿನ ಪ್ರಸಿದ್ಧ ಮತ್ತು ಪ್ರಾಚೀನ ಉದುಮ-ಆಚೇರಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ  ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಹಸಿರುವಾಣಿ ಸಮರ್ಪಣಾ ಮೆರವಣಿಗೆ ನಡೆಯಿತು.  


ಚೆಂಡಮೇಳ, ಮುತ್ತುಕೊಡೆ,  ತಾಳಪೆÇಲಿಯೊಂದಿಗೆ ಉದುಮ ಅಯ್ಯಪ್ಪ ಭಜನಾ ಮಂದಿರದಿಂದ ಆರಂಭಗೊಮಡ ಮೆರವಣೀಗೆ ಉದುಮ ನಂಬಿಯಾರ್ ಕೀಚಲು ಮಾರ್ಗವಾಗಿ ಆಚೇರಿ ಶ್ರೀಮಹಾವಿಷ್ಣು ದೇವಸ್ಥಾನಕ್ಕೆ ಆಗಮಿಸಿತು. ಕ್ಷೇತ್ರ ಮಾತೃ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

31ರಂದು ಬೆಳಗ್ಗೆ 5ಕ್ಕೆ ದೇವಾಲಯ ಉದ್ಘಾಟನೆ, ಸಂಜೆ 4ಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನವೀಕರಣ ಮತ್ತು ನಿರ್ಮಾಣಕಾರ್ಯಗಳನ್ನು ಲೋಕಾರ್ಪಣೆಗೈದು ಆಶೀರ್ವಚನ ನೀಡುವರು. ಕಾರ್ಯಕ್ರಮದ ಅಂಗವಾಗಿ ಭಜನೆ, ಕೋಲ್ಕಲಿ ನಡೆಯುವುದು.

5ರಂದು ಬೆಳಗ್ಗೆ 4.30ಕ್ಕೆ 108 ತೆಂಗಿನಕಾಯಿ ಮಹಾ ಗಣಪತಿ ಹೋಮ, ಸಂಜೆ ತಾಯಂಬಕ, ಶ್ರೀ ಭೂತಬಲಿ, ಮೇಳಂ, ತಿಡಂಬ ನೃತ್ಯ ನಡೆಯುವುದು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries