ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆ 2026ರ ಅಂಗವಾಗಿ, ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಯಿತು. ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅಧ್ಯಕ್ಷರಾಗಿರುವ ಸಮಿತಿಯಲ್ಲಿ ಜಿಲ್ಲಾವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ಕಾಸರಗೋಡು ಆರ್‍ಡಿಒ ಬಿನು ಜೋಸೆಫ್, ಜಿಲ್ಲಾ ಕಾನೂನು ಅಧಿಕಾರಿ ಎಸ್.ಎನ್. ಶಶಿ ಕುಮಾರ್, ಅಕ್ಷಯ ಐಟಿ ಮಿಷನ್ ಡಿಪಿಎಂ ಸಿಎಂ ಮಿಥುನ್ ಕೃಷ್ಣ, ಮತ್ತು ನಿವೃತ್ತ ಮಾಹಿತಿ ಅಧಿಕಾರಿ ಮತ್ತು ಪತ್ರಕರ್ತ ಸಿ.ಎಚ್. ಆನಂದ ಸೇರಿದಂತೆ ಸದಸ್ಯರನ್ನು ಒಳಗೊಂಡ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಯಿತು.

