HEALTH TIPS

ಪಶ್ಚಿಮ ಬಂಗಾಳ| ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮುಂದುವರಿದ ಉನ್ನತ ಅಧಿಕಾರಿಗಳ ವರ್ಗಾವಣೆ

ಕೋಲ್ಕತಾ: ಪಶ್ಚಿಮ ಬಂಗಾಳದ ಉಪ ಪೊಲೀಸ್ ಮಹಾ ನಿರೀಕ್ಷಕ (ಡಿಐಜಿ) ದರ್ಜೆಯ ಐವರು ಉನ್ನತ ಐಪಿಎಸ್ ಅಧಿಕಾರಿಗಳು ಮತ್ತು 11 ಜಿಲ್ಲಾಧಿಕಾರಿಗಳನ್ನು ಚುನಾವಣಾ ಆಯೋಗವು ಬುಧವಾರ ವರ್ಗಾವಣೆಗೊಳಿಸಿದೆ.

ವಿಧಾನಸಭಾ ಚುನಾವಣೆಯ ವೇಳೆ, ಜಿಲ್ಲಾಧಿಕಾರಿಗಳು ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿಯೂ ಕರ್ತವ್ಯ ನಿರ್ವಹಿಸುತ್ತಾರೆ.

ಇಂಥ ಏಕಪಕ್ಷೀಯ ಕ್ರಮಗಳನ್ನು ತೆಗೆದುಕೊಳ್ಳದಂತೆ ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ಗೆ ಪತ್ರ ಬರೆದಿರುವ ಹೊರತಾಗಿಯೂ, ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮೇಲೆ ತನ್ನ ನಿಯಂತ್ರಣ ಸಾಧಿಸುವ ಕಾರ್ಯಗಳನ್ನು ಮುಂದುವರಿಸಿದೆ.

ರಾಜ್‌ಗಂಜ್, ಮುರ್ಷಿದಾಬಾದ್, ಬರ್ದಮಾನ್, ಪ್ರೆಸಿಡೆನ್ಸಿ ಮತ್ತು ಜಲ್ಪಾಯ್‌ಗುರಿ ವಲಯಗಳಲ್ಲಿ ಕ್ರಮವಾಗಿ ರಾಥೋಡ್ ಅಮಿತ್‌ಕುಮಾರ್ ಭರತ್, ಅಜೀತ್ ಸಿಂಗ್ ಯಾದವ್, ಶ್ರೀಹರಿ ಪಾಂಡೆ, ಕನ್ಕರ್ ಪ್ರಸಾದ್ ಬರುಯಿ ಮತ್ತು ಅಂಜಲಿ ಸಿಂಗ್‌ರನ್ನು ನೇಮಿಸುವಂತೆ ಭಾರತೀಯ ಚುನಾವಣಾ ಆಯೋಗದ ಕಾರ್ಯದರ್ಶಿ ಸುಜೀತ್ ಕುಮಾರ್ ಮಿಶ್ರಾ ಬಂಗಾಳ ಮುಖ್ಯ ಕಾರ್ಯದರ್ಶಿ ದುಶ್ಯಂತ್ ನರಿಯಾಲಗೆ ಪತ್ರವೊಂದನ್ನು ಬರೆದಿದ್ದಾರೆ.

ಅವರನ್ನು ಮಾರ್ಚ್ 19ರೊಳಗೆ ನೇಮಕ ಮಾಡಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಅದೇ ವೇಳೆ, ದಾರ್ಜೀಲಿಂಗ್, ಅಲಿಪುರ್ದುವರ್, ಕೂಚ್‌ಬೆಹಾರ್, ಜಲ್ಪಾಯ್‌ಗುರಿ, ಉತ್ತರ ದೀನಜ್‌ಪುರ, ಮಾಲ್ಡಾ, ಮುರ್ಷಿದಾಬಾದ್, ನಾದಿಯ, ಪೂರ್ವ ಬರ್ದಮಾನ್, ಉತ್ತರ 24 ಪರಗಣ, ದಕ್ಷಿಣ 24 ಪರಗಣ ಜಿಲ್ಲೆಗಳ ಜಿಲ್ಲಾದಿಕಾರಿಗಳನ್ನಾಗಿ ಕ್ರಮವಾಗಿ ಹರಿಶಂಕರ್ ಪಣಿಕ್ಕರ್, ಟಿ. ಬಾಲಸುಬ್ರಮಣ್ಯನ್, ಜಿತಿನ್ ಯಾದವ್, ಸಂದೀಪ್ ಘೋಷ್, ವಿವೇಕ್ ಕುಮಾರ್, ರಜನ್‌ವೀರ್ ಸಿಂಗ್ ಕಪೂರ್, ಆರ್. ಅರ್ಜುನ್, ಶ್ರೀಕಾಂತ್ ಪಲ್ಲಿ, ಶ್ವೇತಾ ಅಗರ್ವಾಲ್, ಶಿಲ್ಪಾ ಗೌರಿಸರಿಯ, ಅಭಿಶೇಕ್ ಕುಮಾರ್ ತಿವಾರಿ, ಸ್ಮಿತಾ ಪಾಂಡೆ ಮತ್ತು ರಣಧೀರ್ ಕುಮಾರ್‌ರನ್ನು ನೇಮಿಸಲಾಗಿದೆ.

ವರ್ಗಾವಣೆಗೊಂಡಿರುವ ಅಧಿಕಾರಿಗಳಿಗೆ ಮುಂಬರುವ ವಿಧಾನಸಭಾ ಚುನಾವಣೆ ಪೂರ್ಣಗೊಳ್ಳುವವರೆಗೆ ಯಾವುದೇ ಚುನಾವಣೆ ಸಂಬಂಧಿ ಜವಾಬ್ದಾರಿಗಳನ್ನು ಕೊಡಬಾರದು ಎಂಬುದಾಗಿಯೂ ಚುನಾವಣಾ ಆಯೋಗ ನಿರ್ದೇಶಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries