ಮಧೂರು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಮಾ. 19ರಿಂದ ಮೇ 16ರ ವರೆಗೆ ನಡೆಯಲಿರುವ 'ವಸಂತ ಪೂಜೆ'ಹಾಗೂ ಏ. 14ರಿಂದ 18ರ ವರೆಗೆ ನಡೆಯಲಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಯಶಸ್ವಿಗಾಗಿ ಸಮಾಲೋಚನಾ ಸಭೆ ದೇವಾಲಯದಲ್ಲಿ ಜರುಗಿತು.ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ. ಜಗದೀಶ್ ಪ್ರಸಾದ್ ಮಾಹಿತಿ ನೀಡಿದರು.
ಈ ಸಂದರ್ಭ ಜಾತ್ರಾಮಹೋತ್ಸವ ಹಾಗೂ ವಸಂತ ಪೂಜೆ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಸಮಿತಿ ರಚಿಸಲಾಯಿತು. ಜಯದೇವ ಖಂಡಿಗೆ ಗೌರವಾಧ್ಯಕ್ಷ, ಪ್ರಭಾಶಂಕರ ಮಾಸ್ಟರ್ ಅಧ್ಯಕ್ಷ, ಕೆ. ಜಗದೀಶ್ ಪ್ರಸಾದ್ ಪ್ರಧಾನ ಕಾರ್ಯದರ್ಶಿ, ಸಂತೋಷ್ ಕುಮಾರ್ ಮಧೂರು ಕಾರ್ಯದರ್ಶಿ ಹಾಗೂ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

