ಕಾಸರಗೋಡು: ಕೇರಳ ರಾಜ್ಯ ಪಿಂಚಣಿದಾರರ ಸಂಘ 28ನೇ ರಾಜ್ಯ ಸಮ್ಮೇಳನದ ಪೂರ್ವಭಾವಿಯಾಗಿ ರಾಜ್ಯ ಪರಿಷತ್ ಸಭೆ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು.
ಬಿಎಂಎಸ್ ದಕ್ಷಿಣ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಎಂ.ಪಿ. ರಾಜೀವ್ ರಾಜ್ಯ ಪರಿಷತ್ ಸಭೆ ಉದ್ಘಾಟಿಸಿದರು. ಈ ಸಂದರ್ಭ ಪಿಂಚಣಿದಾರರ ಕ್ಷಾಮಭತ್ತೆ ಬಾಕಿ ಹಣವನ್ನು ಒಂದೇ ಕಂತಿನಲ್ಲಿ ಪಾವತಿಸುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.
ಕೇರಳ ರಾಜ್ಯ ಪಿಂಚಣಿದಾರರ ಸಂಘದ ರಾಜ್ಯಾಧ್ಯಕ್ಷ ಬಿ.ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ.ಜಯಭಾನು, ರಾಜ್ಯ ಕಾರ್ಯದರ್ಶಿ ಎ.ಪ್ರಕಾಶ್, ಮುಖಂಡರಾದ ಜಿ.ಗೋಪ ಕುಮಾರ್, ಕೆ.ಕೃಷ್ಣನ್, ಸಿ.ಸುರೇಶ್ ಕುಮಾರ್, ಕೆ.ಎನ್.ವಿನೋದ್, ಎಂ.ಈಶ್ವರ ರಾವ್, ಕಾಸರಗೋಡು ಜಿಲ್ಲೆರಾಜ್ಯ ಪ್ರಧಾನ ಕಾರ್ಯದರ್ಶಿ ಅ. ಪಿ.ಜಯಭಾನು, ರಾಜ್ಯ ಕಾರ್ಯದರ್ಶಿ ಎ.ಪ್ರಕಾಶ್, ಮುಖಂಡರಾದ ಜಿ.ಗೋಪ ಕುಮಾರ್, ಕೆ.ಕೃಷ್ಣನ್, ಸಿ.ಸುರೇಶ್ ಕುಮಾರ್, ಕೆ.ಎನ್.ವಿನೋದ್, ಎಂ.ಈಶ್ವರ ರಾವ್, ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ನಾಗರಾಜ ಭಟ್ ಉಪಸ್ಥಿತರಿದ್ದರು. ರಾಜ್ಯ ಉಪಾಧ್ಯಕ್ಷ ಕೆ.ಮುತ್ತುಕೃಷ್ಣನ್ ಸ್ವಾಗತಿಸಿದರು, ರಾಜ್ಯ ಸಮಿತಿ ಸದಸ್ಯ ಪಿ.ದಿಲೀಪ್ ಕುಮಾರ್ ವಂದಿಸಿದರು.

