ಕಾಸರಗೋಡು: ನಾಯರ್ ಐಕ್ಯ ವೇದಿಕೆಯ ಆಶ್ರಯದಲ್ಲಿ ಹಕ್ಕುಗಳ ರಕ್ಷಣಾ ಜಾಥಾ ಮಾರ್ಚ್ 7 ರಿಂದ 13 ರವರೆಗೆ ಕಾಸರಗೋಡಿನಿಂದ ತಿರುವನಂತಪುರದವರೆಗೆ ನಡೆಯಲಿದೆ. ಮಾರ್ಚ್ 13 ರಂದು ಜಥಾ ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದ್ದು, ಸೆಕ್ರೆಟರಿಯೇಟ್ ಮೆರವಣಿಗೆಯಲ್ಲಿಸಾವಿರಾರು ಮಂದಿ ಭಾಗವಹಿಸಲಿದ್ದಾರೆ.
ವಿವಿಧ ಬೇಡಿಕೆ ಮುಂದಿರಿಸಿ ಜಾಥಾ ಆಯೋಜಿಸಲಾಗಿದೆ. ನ್ಯಾಯಮೂರ್ತಿ ಎಂ.ಆರ್. ಹರಿಹರನ್ ನಾಯರ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು, ಸಂವಿಧಾನ ಖಾತ್ರಿಪಡಿಸಿದ ಸಮಾನ ನ್ಯಾಯವನ್ನು ಅನುಷ್ಠಾನಗೊಳಿಸಬೇಕು, ದೇವಾಲಯದ ಆಡಳಿತವನ್ನು ದೇವಾಲಯದ ಭಕ್ತರಿಗೆ ಹಸ್ತಾಂತರಿಸಬೇಕು, ಚಟ್ಟಂಬಿ ಸ್ವಾಮಿಗಳಿಗೆ ಅರ್ಹ ಗೌರವ ಸಲ್ಲಿಸಬೇಕು, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರ ವಿರುದ್ಧ ತಾರತಮ್ಯ, ಅನ್ಯಾಯ ಮತ್ತು ಕ್ರೂರ ನ್ಯಾಯವನ್ನು ಕೊನೆಗೊಳಿಸಬೇಕು ಇವೇ ಮುಂತಾದ ಬೇಡಿಕೆ ಮುಂದಿರಿಸಿ ಜಾಥಾ ನಡೆಸಲಾಗುತ್ತಿದೆ.

