ಪೆರ್ಲ: ನಲ್ಕದ ನಂದಾದೀಪ ಸಂಘಟನೆಯ ಪಂಚ ಸಂಭ್ರಮ ಕಾರ್ಯಕ್ರಮ ಮಾ. 1ರಂದು ನಲ್ಕ ಶ್ರೀ ವಾಗ್ದೇವಿ ಭಜನಾಮಂದಿರ ವಠಾರದಲ್ಲಿ ಜರುಗಲಿದೆ. ಸಂಜೆ 4ಕ್ಕೆ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, 7ಕ್ಕೆ ಸಭಾ ಕಾರ್ಯಕ್ರಮ ನಡೆಯುವುದು.
ಎಣ್ಮಕಜೆ ಗ್ರಾಪಂ ಅಧ್ಯಕ್ಷೆ ಕುಸುಮಾವತಿ ಬಿ. ಸಮಾರಂಭ ಉದ್ಘಾಟಿಸುವರು. ಕಮಲಾಕ್ಷ ನಾಯಕ್ ನಲ್ಕ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಜಿ.ಪಂ ಸದಸ್ಯ ಸೋಮಶೇಖರ ಜೆ.ಎಸ್, ಡಾ. ಉದಯಶಂಕರ ನೂಜಿ, ಗ್ರಾಪಂ ಸದಸ್ಯ ಜಗದೀಶ್ ಕುಲಾಲ್, ಗೋಪಾಲಕೃಷ್ಣ ವಾಂತಿಚ್ಚಾಲ್, ವಿಠಲ ರೈ, ಉದ್ಯಮಿ ಉದಯ ಚೆಟ್ಟಿಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದ ಅಂಗವಾಗಿ ಹನುಮಗಿರಿ ಶ್ರೀ ಕೋದಂಡರಾಮ ಯಕ್ಷಗಾನ ಮಂಡಳಿಯಿಂದ'ಚಂದ್ರಾವತಿ ವಿಲಾಸ ಮಾಯಾ ಮಾರುತೇಯ'ಯಕ್ಷಗಾನ ಬಯಲಾಟ ಜರಗಲಿರುವುದು.

