HEALTH TIPS

ಮಾ. 4 ರಿಂದ ಪುತ್ತೂರು ಕೊಟ್ಯ ಶ್ರೀಧೂಮಾವತೀ ಕ್ಷೇತ್ರ ಧರ್ಮನೇಮೋತ್ಸವ

ಕುಂಬಳೆ: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಪುತ್ತೂರುಕೊಟ್ಯ ಶ್ರೀಧೂಮಾವತೀ ಕ್ಷೇತ್ರದ ವಾರ್ಷಿಕ ಧರ್ಮನೇಮೋತ್ಸವ, ಮುಡಿಪು ಪೂಜೆ, ಪರಿವಾರ ದಐವಗಳ ಕೋಲ ಮಾ. 4ರಿಂದ 6ರ ವರೆಗೆ ಜರುಗಲಿದೆ. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯುವುದು.

ಕಾರ್ಯಕ್ರಮದ ಪೂರ್ವಭಾವಿಯಾಗಿ ತರವಾಡುಮನೆಯಲ್ಲಿ ಶನಿವಾರ ಗಣಹೋಮ, ಹರಿಸೇವೆ, ಕೊರತಿ ದೈವದ ಕೋಲ, ಪಂಜುರ್ಲಿ-ಕಲ್ಲುರ್ಟಿ ದೈವದ ಕೋಲ  ನಡೆಯಿತು.

ಮಾ 4ರಂದು ಬೆಳಗ್ಗೆ ಕ್ಷೇತ್ರದಲ್ಲಿ ಗಣಪತಿ ಹೋಮ, ಸಂಜೆ 7ರಿಂದ ಭಜನೆ ನಡೆಯುವುದ. 5ರಂದು ಬೆಳಗ್ಗೆ 11ಕ್ಕೆ ದೀಪಾರಾಧನೆ, ಮಧ್ಯಾಹ್ನ 2ಗಮಟೆಗೆ ಸರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 7ಕ್ಕೆ ತೊಡಙಲ್, ರಾತ್ರಿ 10ಕ್ಕೆ ಧಾರ್ಮಿಕ ಸಭೆ, 11ರಿಂದ ಮಂಜೇಶ್ವರದ ಶಾರದಾ ಆಟ್ರ್ಸ್ ತಂಡದ ಕಲಾವಿದರಿಂದ'ಕಥೆ ಎಡ್ಡೆಂಡು'ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು.

6ರಂದು ಮಧ್ಯಾಹ್ನ 2ಗಂಟೆಗೆ ದೀಪಾರಾಧನೆ, ಸಂಜೆ 4ರಿಂದ ರಾಜ್ಯಂದಿದೈವ ಶ್ರೀ ಧೂಮಾವತೀ  ದೈವದ ಧರ್ಮನ ನೇಮ ನಡೆಯುವುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries