ಕಾಸರಗೋಡು: ಕೇರಳ ಕಾನೂನು ಸೇವಾ ಪ್ರಾಧಿಕಾರವು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ'ಗೋತ್ರ ವರ್ಧನ ಯೋಜನೆ'ಯನ್ವಯ ನಾಡಿನ ಹಿರಿಮೆ ಗೋತ್ರ ಮಹೋತ್ಸವವನ್ನು ವೆಸ್ಟ್ ಎಳೇರಿ ನಾಟಕ್ಕಲ್ ಎಎಲ್ ಪಿ ಶಾಲೆಯಲ್ಲಿ ನಾಡಿನ ಹಿರಿಮೆ ಗೋತ್ರ ಮಹೋತ್ಸವ ಆಯೋಜಿಸಲಾಯಿತು.
ಹೈಕೋರ್ಟ್ ನ್ಯಾಯಮೂರ್ತಿ ಸಿ. ಪ್ರದೀಪ್ ಕುಮಾರ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಸಾನು ಎಸ್. ಪಣಿಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜಿಲ್ಲಾಡಳಿತದಿಂದ ಹಿಂದುಳಿದ ಬುಡಕಟ್ಟು ಜನಾಂಗದವರಿಗೆ ವೀಲ್‍ಚೇರ್‍ಗಳು ಮತ್ತು ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಜಿಲ್ಲಾಧಿಕಾರಿ ಕೆ.ಇನ್ಬಆ ಶೇಖರ್ ಐ.ಎ.ಎಸ್.ಕಾರ್ಯಕ್ರಮ ನಿರ್ವಹಿಸಿದರು. ಬಳಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಲತಾ, ಗ್ರಾಮ ಪಂಚಾಯಿತಿ ಸದಸ್ಯೆ ಶೀಬಾ ಉನ್ನಿಕೃಷ್ಣನ್, ಹೊಸದುರ್ಗ ವಕೀಲರ ಸಂಘದ ಅಧ್ಯಕ್ಷ ಕೆ.ಗೋಪಾಲನ್ ನಾಯರ್, ಕಾಸರಗೋಡುವಕೀಲರ ಸಂಘದ ಅಧ್ಯಕ್ಷ ಪಿ. ನಾರಾಯಣನ್ ಮತ್ತು ಪರಪ್ಪ ಬುಡಕಟ್ಟು ಅಭಿವೃದ್ಧಿ ಅಧಿಕಾರಿ ಬಿ.ಸಿ. ಅಯ್ಯಪ್ಪನ್ UPSಈಣIಖಿಖIಆಈಆಖU. . ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಪಿ. ಎಂ. ಸುರೇಶ್ ಧನ್ಯವಾದ ಅರ್ಪಿಸಿದರು.
ಬುಡಕಟ್ಟು ಇÁನಪದ ಕಲಾ ಪ್ರಕಾರಗಳ ಪ್ರಸ್ತುತಿ, ಮ್ಯಾಜಿಕ್ ಪ್ರದರ್ಶನ ಮತ್ತು ಜಾನಪದ ಗೀತೆಗಳು ನಡೆದವು. ನಂತರ ವಿಚಾರ ಸಂಕಿರಣ ಮತ್ತು ಕಾನೂನು ಅರಿವು ತರಗತಿ
ನಡೆಯಿತು. ವಿವಿಧ ಇಲಾಖೆಗಳ ಮಳಿಗೆಗಳನ್ನು ಸಹ ಸ್ಥಾಪಿಸಲಾಗಿತ್ತು.



