HEALTH TIPS

ಮಾಯಿಪ್ಪಾಡಿ 'ಡಯೆಟ್'ನ ನೂತನ ಆಡಳಿತಾತ್ಮಕ ಬ್ಲಾಕ್‍ನ ಉದ್ಘಾಟನೆ

ಕಾಸರಗೋಡು: ಜಿಲ್ಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ಮುನ್ನಡೆಸುತ್ತಿರುವ ಮೈಪಾಡಿಯ 'ಡಯಟ್'ಗಾಗಿ ನಿರ್ಮಿಸಲಾದ ಹೊಸ ಆಡಳಿತಾತ್ಮಕ ಬ್ಲಾಕ್‍ನ ಉದ್ಘಾಟನೆಯನ್ನು ಶಸಕ ಎನ್.ಎ ನೆಲ್ಲಿಕುನ್ನು ನೆರವೇರಿಸಿದರು.  ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅನ್ವಯ ನೂತನ ಕಟ್ಟಡ ನಿರ್ಮಿಸಲಾಗಿದೆ. 


ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜ್ಞಾನಿ ಶಾನಬೋಗ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಸರಗೋಡು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಉಷಾ ಅರ್ಜುನ್, ಮಧೂರು ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ದಾಕ್ಷಾಯಣಿ, ಮಾಧವ ಮಾಸ್ಟರ್, ಮಧೂರು ಗ್ರಾಮ ಪಂಚಾಯಿತಿ ಸದಸ್ಯ ರವಿ ಗಟ್ಟಿ, ಎಸ್ ಎಸ್ ಕೆ ಡಿಪಿಸಿ ವಿ.ಎಸ್. ಬಿಜುರಾಜ್, ಮತ್ತು ವಿದ್ಯಾಕಿರಣಂ ಸಂಯೋಜಕ ಟಿ.ಪ್ರಕಾಶನ್, ಮಾಜಿ ಡಯಟ್ ಪ್ರಾಚಾರ್ಯ ಸಿ.ಎಂ. ಬಾಲಕೃಷ್ಣನ್,   ಡಾ. ಪಿ.ವಿ. ಕೃಷ್ಣಕುಮಾರ್, ಪಿಟಿಎ ಅಧ್ಯಕ್ಷ ಸುರೇಶ್‍ಕುಮಾರ್, ಎಸ್‍ಎಂಸಿ ಅಧ್ಯಕ್ಷ ನಾರಾಯಣನ್ ಮತ್ತು ಸಂತೋಷ್ ಕೆ. ಜಕಾರಿಯಾ ಉಪಸ್ಥಿತರಿದ್ದರು.

ಲೋಕೋಪಯೋಗಿ ಸಹಾಯಕ ಎಂಜಿನಿಯರ್ ರೇಷ್ಮಾ ಯೋಜನಾ ವರದಿ ಮಂಡಿಸಿದರು. ಹೊಸ ಆಡಳಿತಾತ್ಮಕ ಬ್ಲಾಕ್‍ನಲ್ಲಿ ಪ್ರಾಂಶುಪಾಲರ ಕ್ಯಾಬಿನ್, ಕಚೇರಿ, ವೈದ್ಯಕೀಯ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ, ಪ್ರಾತ್ಯಕ್ಷಿಕೆ ಸಭಾಂಗಣ, ಕ್ಯಾಂಟೀನ್ ಮುಂತಾದ ಸೌಲಭ್ಯ ಒಳಗೊಂಡಿದೆ. ಯೋಜನೆಯ ಮುಂದಿನ ಹಂತದಲ್ಲಿ ಎರಡನೇ ಮಹಡಿಯಲ್ಲಿ ಶೈಕ್ಷಣಿಕ ಬ್ಲಾಕ್ ಅನ್ನು ನಿರ್ಮಿಸಲು ಯೋಜನೆಯಿರಿಸಿಕೊಳ್ಳಲಾಗಿದೆ.

ಡಯಟ್ ಪ್ರಾಂಶುಪಾಲ ಡಾ. ಕೆ. ರಘುರಾಮ ಭಟ್ ಸ್ವಾಗತಿಸಿದರು. ಸಿಬ್ಬಂದಿ ಕಾರ್ಯದರ್ಶಿ ಡಾ. ವಿನೋದ್ ಕುಮಾರ್ ಪೆರುಂಬಳ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries