HEALTH TIPS

ವೈರಿಗಳಿಗೆ ಮಾತ್ರ ಹೊರ್ಮುಜ್ ಜಲಸಂಧಿ ಮುಚ್ಚಲಾಗಿದೆ: ಇರಾನ್‌ ಪ್ರತಿನಿಧಿ

 ದುಬೈ: ಕೊಲ್ಲಿ ರಾಷ್ಟ್ರಗಳಲ್ಲಿ ಸಾಗರ ಸುರಕ್ಷತೆಗಾಗಿ ಸಹಕರಿಸಲು ಇರಾನ್ ಸಿದ್ಧವಾಗಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಮುದ್ರಯಾನ ಸಂಘಟನೆಯ (ಐಎಂಒ) ಇರಾನ್‌ ಪ್ರತಿನಿಧಿ ತಿಳಿಸಿದ್ದಾರೆ. 


ಅಂತರರಾಷ್ಟ್ರೀಯ ಸಮುದ್ರಯಾನ ಸಂಘಟನೆಯೊಂದಿಗೆ ಸಹಕರಿಸಲು ಇರಾನ್ ಬದ್ಧವಾಗಿದೆ ಎಂದು ಇರಾನ್‌ ಪ್ರತಿನಿಧಿ ಅಲಿ ಮೌಸವಿ ಹೇಳಿದ್ದಾರೆ.

ಹೊರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ವೈರಿಗಳು ಹಾಗೂ ಅವರೊಂದಿಗೆ ನಂಟು ಹೊಂದಿರುವ ರಾಷ್ಟ್ರಗಳನ್ನು ಹೊರತುಪಡಿಸಿ ಇತರೆ ಎಲ್ಲ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದೆ ಎಂದು ಅಲಿ ಮೌಸವಿ ಹೇಳಿದ್ದಾರೆ.

ಇರಾನ್‌ನೊಂದಿಗೆ ಭದ್ರತೆ ಹಾಗೂ ಸುರಕ್ಷತಾ ವ್ಯವಸ್ಥೆ ಖಚಿತಪಡಿಸುವ ಮೂಲಕ ಕಿರಿದಾದ ಜಲಮಾರ್ಗದ ಮೂಲಕ ಸಂಚಾರ ಸಾಧ್ಯ ಎಂದು ಅವರು ಹೇಳಿದ್ದಾರೆ.

ರಾಜತಾಂತ್ರಿಕತೆ ಇರಾನ್‌ನ ಆದ್ಯತೆಯಾಗಿದೆ. ಪರಸ್ಪರ ನಂಬಿಕೆ ಹಾಗೂ ವಿಶ್ವಾಸವು ಹೆಚ್ಚು ಮುಖ್ಯವೆನಿಸುತ್ತದೆ. ಅಮೆರಿಕ ಹಾಗೂ ಇಸ್ರೇಲ್ ನಡೆಸಿರುವ ದಾಳಿಯು ಹೊರ್ಮುಜ್ ಜಲಸಂಧಿಯಲ್ಲಿ ಈಗಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಇಸ್ರೇಲ್ ಅಣು ಕೇಂದ್ರದ ಸಮೀಪ ಅಪ್ಪಳಿಸಿದ ಇರಾನ್ ಕ್ಷಿಪಣಿ..ಆವರಿಸಿದ ಬೆಂಕಿ ಹೊರ್ಮುಜ್ ಜಲಸಂಧಿ ತೆರೆಯಲು ಇರಾನ್‌ಗೆ 48 ಗಂಟೆಗಳ ಗಡುವು ನೀಡಿದ ಡೊನಾಲ್ಡ್ ಟ್ರಂಪ್

48 ತಾಸಿನ ಗಡುವು ನೀಡಿದ ಟ್ರಂಪ್...

ಏತನ್ಮಧ್ಯೆ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ತೆರೆಯಲು ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 48 ತಾಸಿನ ಗಡುವು ನೀಡಿದ್ದಾರೆ. ಇಲ್ಲದಿದ್ದರೆ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ ಎಚ್ಚರಿಸಿದ್ದಾರೆ.

ಮತ್ತೊಂದೆಡೆ ಇಸ್ರೇಲ್‌ನ ಪರಮಾಣು ಕೇಂದ್ರದ ಸಮೀಪವಿರುವ ಡಿಮೋನಾ ನಗರದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries