HEALTH TIPS

ದೇಶದ ಭದ್ರತೆಗೂ ಪಶ್ಚಿಮ ಬಂಗಾಳ ಚುನಾವಣೆಗೂ ನಂಟಿದೆ: ಅಮಿತ್ ಶಾ

ಕೋಲ್ಕತ್ತ: ಪಶ್ಚಿಮ ಬಂಗಾಳ ಚುನಾವಣೆಗೆ ಬಿಜೆಪಿ ಪರ ‍‍ಪ್ರಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀವ್ರಗೊಳಿಸಿದ್ದು, ಟಿಎಂಸಿ ಸರ್ಕಾರದ ವಿರುದ್ಧ ಶನಿವಾರ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿದ್ದಾರೆ.

ಟಿಎಂಸಿ ಪ್ರಣಾಳಿಕೆ: 10 ಭರವಸೆ ಜೊತೆಗೆ ಮಹಿಳೆಯರ ಮಾಸಿಕ ನೆರವು ₹500ಕ್ಕೆ ಹೆಚ್ಚಳ

ಕೋಲ್ಕತ್ತದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಟಿಎಂಸಿಯ 15 ವರ್ಷಗಳ ಆಡಳಿತದಿಂದಾಗಿ ರಾಜ್ಯವು, ಒಳನುಸುಳಿವಿಕೆ, ತುಷ್ಠೀಕರಣ ರಾಜಕಾರಣ ಹಾಗೂ ಗಡಿ ಅಭದ್ರತೆಯ ಪ್ರಮುಖ ಕಾರಿಡರ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

'ಬಂಗಾಳ ಚುನಾವಣೆಯೂ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಮುಖ್ಯವಾದುದು. ದೇಶದ ಭದ್ರತೆಗೂ ಬಂಗಾಳ ಚುನಾವಣೆಗೂ ನಂಟಿದೆ' ಎಂದು ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅಸ್ಸಾಂನಲ್ಲಿ ಒಳನುಸುಳುವಿಕೆ ಅಂತ್ಯವಾಗಿದೆ. ಇದೀಗ ಒಳನುಸುಳಲು ಇರುವ ಏಕೈಕ ಮಾರ್ಗ ಪಶ್ಚಿಮ ಬಂಗಾಳ ಮಾತ್ರ ಎಂದು ಶಾ ಹೇಳಿದ್ದಾರೆ.

ಕೇಂದ್ರ ಸರ್ಕಾರ ಪದೇ ಪದೇ ಮನವಿ ಮಾಡಿಕೊಂಡರೂ, ಗಡಿ ಬೇಲಿ ಹಾಕಲು ಮಮತಾ ಬ್ಯಾನರ್ಜಿ ಸರ್ಕಾರ ಭೂಮಿ ನೀಡಿಲ್ಲ ಎಂದು ಆರೋಪಿಸಿದ ಶಾ, ಅವರ ನಡೆ ರಾಜಕೀಯ ಪ್ರೇರಿತವಾಗಿತ್ತು ಎಂದಿದ್ದಾರೆ.

ಒಳನುಸುಳುಕೋರರ ಮತ ಬ್ಯಾಂಕ್ ಸೃಷ್ಠಿ ಮಾಡಲು ಮಮತಾ ಭೂಮಿ ನೀಡಲಿಲ್ಲ ಎಂದು ಶಾ ದೂರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries